ಬೆಳ್ಳಿ ಬೆಟ್ಟದ ಮೇಲೆ…

My First Flight Experience 

ಎಲ್ಲಿಗೋ ಹೋಗುವಿರಿ ನಿಲ್ಲಿ ಓ ಮೋಡಗಳೆ

ನಿಮಗಿಂತಲೂ ಮೇಲೆ ನಾವೂ ಹಾರುವೆವು!!!

ಕಚೇರಿ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ ಸಂದರ್ಭ ತೆಗೆದ ಚಿತ್ರವಿದು.

ಮೊದಲ ಬಾರಿಗೆ ಆಕಾಶದಲ್ಲಿ ತೇಲಾಡಿದ ಅನುಭವ ನನ್ನದಾದರೆ, ನನ್ನ ಕ್ಯಾಮರಕ್ಕೂ ಸಾಕಷ್ಟು ಆಹಾರ ದೊರೆತವು. ಒಂದೊಂದಾಗಿ ಅವುಗಳು ಇಲ್ಲಿ ಮೂಡಿ ಬರಲಿವೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ನಾವಿದ್ದ ವಿಮಾನ ಇಳಿಯುತ್ತಿರುವಾಗಿನ ಅನುಭವವನ್ನು ನನ್ನ ಕ್ಯಾಮರವು ವೀಡಿಯೋ ಮೂಲಕ ದಾಖಲಿಸಿಕೊಂಡಿದೆ. ಅದನ್ನೂ ಶೀಘ್ರವಾಗಿ ಈ ಬ್ಲಾಗಿನಲ್ಲಿ ಏರಿಸುತ್ತೇನೆ.

6 thoughts on “ಬೆಳ್ಳಿ ಬೆಟ್ಟದ ಮೇಲೆ…

  1. ಅವೀ,

    ವಿಮಾನದಿ ಮೋಡಗಳ ಲೋಕದಲ್ಲಿ ಸಾಗುವುದು ಒಂದು ಸೊಗಸಾದ ಅನುಭವ..
    ಆಕಾಶದಿ ತೇಲಾಡಿದ್ದು ವಿಮಾನದಲ್ಲಿ ಇದ್ದದ್ದಕ್ಕೋ ಅಥವಾ ….:)

  2. ಶಿವ್ ಅವರೆ,

    ನಿಮ್ಮ ಶಂಕೆ ಸಹಜವಾದದ್ದು!!!

    ಆದರೆ ನೀವು ಅಥವಾ ಎಂದು ಕೆಲವು ಚುಕ್ಕಿಗಳನ್ನಿರಿಸಿದ್ದಕ್ಕೆ ಸೇರ್ಪಡೆ (ಸ್ಪಷ್ಟನೆ!):
    ಮೊದಲ ಯಾನದ ಸುಖದಲ್ಲಿ ಮನಸ್ಸು ತೇಲಾಡುತ್ತಿತ್ತು…!!!!

  3. Avi avare, naanu ondu kannada blog shuru madiddene. Adare kannada font nalli yeno problem ide. Neevu yava font upayogistira, hege kannadadalli bariyodu anta tiLisikodteera? Tumba dhanyavada.

  4. ವೀಣಾ ಅವರೆ,
    ಎಲ್ಲಿರುವೇ ಎಲ್ಲೆಲ್ಲಾ ಚೆಲ್ಲಾಡಿರುವೇ… ಎಂದು ಸ್ವಲ್ಪ ತಿರುಗಿಸಿದರೆ ಈ ಮೋಡಗಳಿಗೆ ಸೂಕ್ತವಾದೀತು.

  5. ಅನಾಮಿಕ ಅವರೆ,
    ಕನ್ನಡ ಬ್ಲಾಗುಗಳಿಗೆ ಭವಿಷ್ಯದ ಫಾಂಟ್ ಎಂದೇ ಕರೆಯಲಾಗುವ ಯುನಿಕೋಡ್ ಫಾಂಟ್ ಸೂಕ್ತ. ಅದು ಯಾವುದೇ ಹೊಸ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಆಗಿ ಇರುತ್ತದೆ. ಕನ್ನಡಕ್ಕೆ ಬಳಸುವ ಫಾಂಟಿನ ಹೆಸರು “ತುಂಗಾ”. ಅದು ಅಲ್ಲದಿದ್ದರೆ ಏರಿಯಲ್ ಯುನಿಕೋಡ್ ಫಾಂಟಿನಲ್ಲೂ ಕನ್ನಡ ಕಾಣಿಸುತ್ತದೆ.
    ನಿಮಗೆ ಹೆಚ್ಚಿನ ಮಾಹಿತಿ http://bhashaindia.com/patrons/patronshome.aspx?lang=kn ಇಲ್ಲಿ ಜಾಲಾಡಿದರೆ ಸಿಗಬಹುದು. ಮತ್ತೇನಾದರೂ ಸಹಾಯ ಬೇಕಿದ್ದರೆ ತಿಳಿಸಿ.
    ಧನ್ಯವಾದ.

  6. Pingback: Car

Leave a Reply

Your email address will not be published. Required fields are marked *