ಜೀವನ ತೆರೆದಿಡುವ ಆಣಿಮುತ್ತುಗಳಿವು

2
539

ನೀವು ಬಡವರಾಗಿ ಹುಟ್ಟಿದ್ರೆ, ಅದು ನಿಮ್ಮ ತಪ್ಪಲ್ಲ. ಆದರೆ ಬಡವರಾಗಿಯೇ ಸಾಯುವುದು… ಖಂಡಿತವಾಗಿಯೂ ತಪ್ಪು ನಿಮ್ಮದು. – ಬಿಲ್ ಗೇಟ್ಸ್

ಯಾವುದೇ ಒಂದು ದಿನ, ನಿಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದ್ರೆ, ನೀವು ಸರಿಯಾದ ಹಾದಿಯಲ್ಲಿ ಸಾಗಿಲ್ಲ ಎಂದೇ ಅರ್ಥ. – ಸ್ವಾಮಿ ವಿವೇಕಾನಂದ

ಯಶಸ್ಸಿನ ಮೂರು ಸೂತ್ರಗಳು:
1. ಇತರರಿಗಿಂತ ಹೆಚ್ಚು ತಿಳಿದುಕೊಳ್ಳಿ
2. ಇತರರಿಗಿಂತ ಹೆಚ್ಚು ಶ್ರಮ ಪಡಿ
3. ಇತರರಿಗಿಂತ ಕಡಿಮೆ ನಿರೀಕ್ಷಿಸಿ. – ವಿಲಿಯಂ ಶೇಕ್ಸ್‌ಪಿಯರ್

ನೀವು ಜಯಿಸಿದ್ದೀರೆಂದರೆ, ಯಾವುದೇ ವಿವರಣೆ ನೀಡಬೇಕಿಲ್ಲ. ಆದರೆ ನೀವು ಸೋತರೆ, ವಿವರಣೆ ನೀಡುವುದಕ್ಕೆ ನೀವೇ ಇರಬಾರದು. – ಅಡಾಲ್ಫ್ ಹಿಟ್ಲರ್

ಜಗತ್ತಿನ ಯಾರೊಂದಿಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ. ನೀವೀ ರೀತಿ ಮಾಡಿದ್ದೇ ಆದರೆ, ನಿಮ್ಮನ್ನೇ ನೀವು ಅವಮಾನಿಸಿದಂತೆ. – ಅಲೆನ್ ಸ್ಟ್ರೈಕ್

ನಾವು ನೋಡುತ್ತಿರುವ ವ್ಯಕ್ತಿಯನ್ನೇ ಪ್ರೀತಿಸುವುದು ನಿಮಗೆ ಸಾಧ್ಯವಿಲ್ಲ ಎಂದಾದರೆ, ನಾವು ನೋಡದೆ ಇರುವ ದೇವರನ್ನು ಹೇಗೆ ಪ್ರೀತಿಸಬಲ್ಲಿರಿ? -ಮದರ್ ತೆರೇಸಾ

ಗೆಲ್ಲುವುದೆಂದರೆ ಯಾವಾಗಲೂ ಮೊದಲ ಸ್ಥಾನ ಪಡೆಯುವುದೆಂದಲ್ಲ, ಗೆಲುವು ಎಂದರೆ ನೀವು ಈ ಹಿಂದೆ ಮಾಡಿದ್ದಕ್ಕಿಂತ ಉತ್ತಮ ನಿರ್ವಹಣೆ ತೋರುವುದು. -ಬೋನಿ ಬ್ಲೇರ್

ನಾನು ಸಾವಿರ ಸಲ ವಿಫಲವಾಗಿದ್ದೇನೆಂದು ಹೇಳಿಕೊಳ್ಳಲಾರೆ. ಅದನ್ನೇ… ವೈಫಲ್ಯಕ್ಕೆ ಸಾವಿರ ಕಾರಣಗಳನ್ನು ಪತ್ತೆ ಹಚ್ಚಿದ್ದೇನೆ ಎಂದೇ ಪರಿಗಣಿಸುತ್ತೇನೆ. – ಥಾಮಸ್ ಎಡಿಸನ್

ಎಲ್ಲರೂ ಜಗತ್ತನ್ನು ಬದಲಾಯಿಸುತ್ತೇನೆ ಎನ್ನುತ್ತಾರೆ. ಆದರೆ ಯಾರು ಕೂಡ ತಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. -ಲಿಯೋ ಟಾಲ್‌ಸ್ಟಾಯ್

ಎಲ್ಲರನ್ನೂ ನಂಬುವುದೆಂದರೆ ಅಪಾಯಕಾರಿ; ಅಂತೆಯೇ ಯಾರನ್ನೂ ನಂಬದೇ ಇರುವುದು ಮತ್ತೂ ಅಪಾಯಕಾರಿ. – ಅಬ್ರಹಾಂ ಲಿಂಕನ್

ತಾವೆಂದಿಗೂ ಜೀವನದಲ್ಲಿ ತಪ್ಪನ್ನೇ ಮಾಡಿಲ್ಲ ಎಂದು ಯಾರಾದರೂ ಭಾವಿಸಿದರೆ, ಅವರು ಜೀವನದಲ್ಲೆಂದಿಗೂ ಹೊಸ ವಿಷಯ ಅರಿತುಕೊಳ್ಳಲು ಯತ್ನಿಸಿಲ್ಲ ಎಂದರ್ಥ. – ಐನ್‌ಸ್ಟೈನ್

ವಿಶ್ವಾಸ, ಮಾತು, ಸಂಬಂಧ ಮತ್ತು ಹೃದಯ- ಜೀವನದಲ್ಲಿ ಈ ನಾಲ್ಕನ್ನೆಂದಿಗೂ ಮುರಿಯಬೇಡಿ. ಯಾಕೆಂದರೆ, ಇವುಗಳು ಮುರಿದಾಗ, ಸದ್ದಾಗುವುದಿಲ್ಲ, ಬರೇ ನೋವು ಮಾತ್ರ. – ಚಾರ್ಲ್ಸ್

ಜನರನ್ನು ಅಳೆಯಲು ನೀವು ಆರಂಭಿಸಿದರೆ, ಅವರನ್ನು ಪ್ರೀತಿಸುವುದಕ್ಕೇ ನಿಮಗೆ ಸಮಯ ಇರಲಾರದು. -ಮದರ್ ತೆರೇಸಾ

2 COMMENTS

  1. ಇಂಥ ಸಾಲುಗಳು ನಂಗೆ ತುಂಬಾ ಇಷ್ಟವಾಗುತ್ತವೆ..ಚಿಕ್ಕದಿರುವಾಗ ಬರೆದಿಟ್ಟ ಸಾಲುಗಳು ತುಂಬಿ ಐದು ಪುಸ್ತಕ ಆಗಿದೆ. ಆದರೆ ಬೆಂದಕಾಳೂರಿನಲ್ಲಿ ಬೆಯುವಾಗ ಯಾವುದೂ ನೆನಪಾಗಲ್ಲ..
    -ಚಿತ್ರ

  2. ಚಿತ್ರ,

    ಹೌದು. ಈ ಸಾಲುಗಳೆಲ್ಲಾ ಅದೆಷ್ಟು ಚೆನ್ನಾಗಿ ಜೀವನ ಬೋಧಿಸುತ್ತವೆ. ಸುಮ್ಮನೇ ಕುಳಿತಿದ್ದಾಗ ಕಣ್ಣು ಹಾಯಿಸಿದರೆ ಈ ವಾಕ್ಯಗಳಲ್ಲಿ ಅಡಗಿರುವ ಅಪಾರ ಅರ್ಥ ಅರಿವಿಗೆ ಬರುತ್ತದೆ.

LEAVE A REPLY

Please enter your comment!
Please enter your name here