Home Authors Posts by Avinash B

Avinash B

708 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

How is Nokia C21 Plus: ನೋಕಿಯಾದ ಬಜೆಟ್ ಫೋನ್ ರಿವ್ಯೂ

Nokia C21 Plus Review: ಆಂಡ್ರಾಯ್ಡ್ ಗೋ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್‌ವೇರ್‌ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆ. ಉತ್ತಮ ಬ್ಯಾಟರಿ.

Samsung Galaxy M13 5G: ಡೇಟಾ ಸ್ವಿಚಿಂಗ್, RAM ಹೆಚ್ಚಿಸಬಹುದಾದ ಬಜೆಟ್ ಫೋನ್

Samsung Galaxy M13 5G: ಸ್ವಯಂಚಾಲಿತ ಡೇಟಾ ಸ್ವಿಚಿಂಗ್ ಮತ್ತು RAM ಪ್ಲಸ್ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆದಿದೆ. ಭಾರತಕ್ಕಿನ್ನಷ್ಟೇ ಬರಬೇಕಿರುವ 5ಜಿ ನೆಟ್‌ವರ್ಕ್‌ನ 11 ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ.

Artificial Intelligence, Machine Learning – ಯಂತ್ರಗಳಿಗೆ ‘ಯೋಚನಾ’ ಶಕ್ತಿ

Artificial Intelligence (AI) Machine Learning (ML): ಇತ್ತೀಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ಪದವನ್ನು ನಾವು ತುಸು ಹೆಚ್ಚಾಗಿಯೇ ಕೇಳಲಾರಂಭಿಸಿದ್ದೇವೆ. ನಮ್ಮ ಅನುಗಾಲದ ಒಡನಾಡಿಯೇ ಆಗಿಬಿಟ್ಟಿರುವ ಸ್ಮಾರ್ಟ್ ಫೋನ್‌ಗಳಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನವು ಅಡಕವಾಗಿದೆ ಮತ್ತು ನಾವದನ್ನು ದಿನನಿತ್ಯ ಬಳಸುತ್ತಿದ್ದೇವೆ ಎಂದರೆ ಕೆಲವರಿಗಾದರೂ ಅಚ್ಚರಿಯಾದೀತು.

Samsung Galaxy F13: ಉತ್ತಮ ಬ್ಯಾಟರಿ, ಆಧುನಿಕ ವೈಶಿಷ್ಟ್ಯಗಳ ಬಜೆಟ್ ಫೋನ್

ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಎಫ್ 13 (Samsung Galaxy F13) ಹೆಸರಿನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 6000mAh ಬ್ಯಾಟರಿ ಮತ್ತು ಅತ್ಯಾಧುನಿಕವಾದ 'ಡೇಟಾ ಸ್ವಿಚಿಂಗ್' ವೈಶಿಷ್ಟ್ಯ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ - ಇವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್13 ಹೆಗ್ಗಳಿಕೆ.

ಮನೆ ಮನೆಯಲ್ಲೂ Wi-Fi Router: ಏನಿದರ ಪ್ರಯೋಜನ?

Wi-Fi Router: ಮನೆಮನೆಗಳಲ್ಲಿ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಾದಂತೆ ಅಂತರಜಾಲ ಸಂಪರ್ಕದ ಅನಿವಾರ್ಯತೆಗಳು ಕೂಡ ಹೆಚ್ಚಾಗತೊಡಗಿವೆ. ಪರಿಣಾಮವಾಗಿ ಈಗ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಬಳಕೆಯೂ ವೃದ್ಧಿಯಾಗಿದೆ. ವೈರ್ ಮೂಲಕ ಬರುವ ಅಂತರಜಾಲ ವ್ಯವಸ್ಥೆಯನ್ನು ಮನೆಯೊಳಗಿರುವ ಎಲ್ಲ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಿದರೆ ಕೆಲಸ ಸುಲಭವಾಗುತ್ತದೆ. ಇಂಥ ಸನ್ನಿವೇಶದಲ್ಲಿ ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿರುವ ಶಬ್ದವೇ ವೈಫೈ ರೌಟರ್ ಅಥವಾ ರೂಟರ್.

Tecno Pova 3 Review: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

Tecno Pova 3 Review: ವಿಡಿಯೊದಿಂದ ಎಂಪಿ3ಗೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಡಕವಾಗಿರುವ 'ವಿಷಾ' ಹೆಸರಿನ ವಿಡಿಯೊ ಪ್ಲೇಯರ್‌ನಲ್ಲಿದೆ. ಜೊತೆಗೆ, ನಮ್ಮ ಚಿತ್ರದ ಮೂಲಕ ವೈವಿಧ್ಯಮಯ ಶಾರ್ಟ್ ವಿಡಿಯೊ ರಚಿಸುವ ಹಲವಾರು ಟೆಂಪ್ಲೇಟ್‌ಗಳು ಗಮನ ಸೆಳೆಯುತ್ತವೆ. 'ವಿ-ಲೈಫ್' ಆ್ಯಪ್ ಮೂಲಕ ಎಲ್ಲ ಸ್ಮಾರ್ಟ್ ಸಾಧನಗಳನ್ನು ಒಂದೇ ಕಡೆ ಸೇರಿಸಿಕೊಂಡು ನಿಯಂತ್ರಿಸಬಹುದು. ಗಮನ ಸೆಳೆದಿದ್ದೆಂದರೆ ಹಾಯ್ ಟ್ರಾನ್ಸ್‌ಲೇಟ್ ಎಂಬ ಭಾಷಾಂತರ ಆ್ಯಪ್. ಕನ್ನಡವೂ ಸೇರಿದಂತೆ ದೇಶದ ಮತ್ತು ವಿದೇಶದ ಹಲವಾರು ಭಾಷೆಗಳ ಮಧ್ಯೆ ಅನುವಾದವನ್ನು ಪಠ್ಯ, ಧ್ವನಿ ಮೂಲಕವಾಗಿ ಮಾಡಬಹುದು. ಒಂದೊಂದೇ ವಾಕ್ಯವನ್ನು ಅದು ಬಹುತೇಕ ನಿಖರವಾಗಿ ಅನುವಾದಿಸಿಕೊಡುತ್ತದೆ.

Facebook Profile Lock: ಯಾಕೆ ಬೇಕು, ಯಾಕೆ ಬೇಡ?

Facebook Profile Lock: ಫೇಸ್‌ಬುಕ್ ಜಾಲತಾಣದಲ್ಲಿ ಇತ್ತೀಚೆಗೆ ನಾವು ಸಾಕಷ್ಟು ಪೋಸ್ಟ್‌ಗಳನ್ನು ಕಂಡಿರುತ್ತೇವೆ. ಪ್ರೊಫೈಲ್ ಲಾಕ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವವರ ಸ್ನೇಹದ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಒಕ್ಕಣೆ. ಅಂದರೆ, ಯಾರೋ ಫ್ರೆಂಡ್ ರಿಕ್ವೆಸ್ಟ್ (ಸ್ನೇಹದ ಕೋರಿಕೆ) ಕಳುಹಿಸುತ್ತಾರೆ. ಆದರ ನೋಡಿದರೆ ಪ್ರೊಫೈಲ್ ಲಾಕ್ ಆಗಿರುತ್ತದೆ. ಇದರ ಬಳಕೆ ಹೇಗೆ, ಏನು ಪ್ರಯೋಜನ?

WhatsApp Tricks: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

WhatsApp Tricks: ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ.

Crossbeats Ignite Lyt Smart Watch Review: ಉತ್ತಮ ಬ್ಯಾಟರಿಯ ಅಗ್ಗದ ಸ್ಮಾರ್ಟ್‌ವಾಚ್

Crossbeats Ignite Lyt Smart Watch Review: ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್‌ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್‌ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್‌ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್‌ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.

Apple Apps: ಶಬ್ದ ಭಂಡಾರ ವೃದ್ಧಿಗೆ LookUp, ಮಕ್ಕಳಿಗಾಗಿ Kiddopia ಆ್ಯಪ್, ತೊದಲುವಿಕೆ ನಿಯಂತ್ರಣಕ್ಕೆ...

Apple Apps: ಎಲ್ಲವೂ ಅಂಗೈಯಲ್ಲೇ ದೊರೆಯುತ್ತದೆ ಎಂಬ ಈ ತಂತ್ರಜ್ಞಾನಾಧಾರಿತ ಕಾಲದಲ್ಲಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಬಹುದಾದ, ತೊದಲುವಿಕೆ ನಿಯಂತ್ರಣಕ್ಕೆ ನೆರವಾಗುವ ಮತ್ತು ದೊಡ್ಡವರಿಗೂ ನೆರವಾಗಬಲ್ಲ ಐದು ಆ್ಯಪ್‌ಗಳ ಪರಿಚಯ ಇಲ್ಲಿದೆ. ಇವು ಮೊಬೈಲ್ ಸ್ಕ್ರೀನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಿಗೆ ಜ್ಞಾನವನ್ನೂ ನೀಡಬಹುದಾದ ಆ್ಯಪ್‌ಗಳಾಗಿದ್ದು, ವಿಶೇಷವಾಗಿ Apple ಕಂಪನಿಯು ಡೆವಲಪರ್‌ಗಳಿಗೆ ವಿಶೇಷ ಪ್ರೋತ್ಸಾಹ ನೀಡಿ ರೂಪಿಸಿದವುಗಳು.

APLICATIONS

ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು

‘'ಟೆಕ್ನೋ’ ವಿಶೇಷ#ನೆಟ್ಟಿಗ ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ 'L'ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ 'ಲಾಲಿಪಾಪ್' ಎಂದು ಘೋಷಣೆಯಾಗಿದೆ. ಇತ್ತೀಚಿನ 4.4.4 ಆವೃತ್ತಿಯಾಗಿರುವ...

HOT NEWS