‘ಸರ್ವಜ್ಞ’ ಅನಾವರಣ ಕಾರ್ಯಕ್ರಮ ಸ್ಥಳ ಬದಲು

2
299

ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಚೆನ್ನೈ ಅಯನಾವರಂನ ಜೀವಾ ಉದ್ಯಾನವನ ಪ್ರಶಸ್ತ ಜಾಗವಲ್ಲ, ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆ ಎಂದು ಈ ಹಿಂದೆಯೇ ಹೇಳಿದ್ದೆ.

ಅದಕ್ಕೆ ಪೂರಕವಾಗಿ, ಸ್ವತಃ ತಮಿಳುನಾಡು ಮುಖ್ಯಮಂತ್ರಿ ಸೋಮವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅರಿತುಕೊಂಡಿದ್ದಾರೆ. ಜ್ಞಾನೋದಯವಾಗಲು ಕಾರಣವೇನು ಗೊತ್ತಾಗಿಲ್ಲ. ಇದೀಗ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳವನ್ನೇ ಬದಲಾಯಿಸಿದ್ದಾರೆ. ಇದೀಗ ಪಕ್ಕದ ವಿಲ್ಲಿವಾಕ್ಕಂ ಐಸಿಎಫ್ ಮೈದಾನಕ್ಕೆ ಈ ಕಾರ್ಯಕ್ರಮ ಸ್ಥಳಾಂತರವಾಗಿದೆ.

ಆದರೆ ಪ್ರತಿಮೆ ಮಾತ್ರ ಅದೇ ಜಾಗದಲ್ಲಿರುತ್ತದೆ.

ಇದರ ನಡುವೆ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆದರಿಕೆಗಳು ಇವೆ ಎಂಬ ಊಹಾಪೋಹಗಳಿರುವ ಹಿನ್ನೆಲೆಯಲ್ಲಿ, ಅವರನ್ನು ಈ ಕುರಿತಾಗಿಯೂ ಪ್ರಶ್ನಿಸಲಾಯಿತು. ಆದರೆ, ಬೆದರಿಕೆ ಕಾರಣದಿಂದಲ್ಲ, ಜಾಗದ ಕೊರತೆಯ ಕಾರಣದಿಂದ ಅಂತಾನೇ ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.

ಅಥವಾ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವಿಶಾಲ ಜಾಗವನ್ನು ನೋಡಿ ಕರುಣಾನಿಧಿಯ ಮನಸ್ಸು ದಿಢೀರ್ ಆಗಿ ಬದಲಾಗಿರಬಹಬಹುದೇ?

ಲೊಕೇಶನ್ ಬದಲಾಗಿರುವ ಕುರಿತು ವೆಬ್‌ದುನಿಯಾ ವರದಿ ಇಲ್ಲಿದೆ.

2 COMMENTS

  1. LTTE ಬೆ೦ಬಲಿಗರು ಬೆ೦ಗಳೂರಿನಲ್ಲಿ ಮೆರೆದ ಹರ್ಷೋದ್ಗಾರವನ್ನು ಕಣ್ಣಾರೆ ಕ೦ಡು ಸ೦ತೋಷಗೊ೦ಡ ಕರುಣಾನಿಧಿಯವರು, ಸ್ವಲ್ಪ ದೊಡ್ಡ ಜಾಗದಲ್ಲಿ ಸರ್ವಜ್ಞನ ಪ್ರತಿಮೆಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೇನೋ? ನನಗೆ ತಮಿಳು ವೋಟುಗಳು ಬೀಳೋಹಾಗೆ ವರಕೊಡು ದೇವ ಎ೦ದು ಅ೦ಗಲಾಚಿ ಬೇಡಿಕೊ೦ಡು ಹೋದ ಕರ್ನಾಟಕದ ಮುಖ್ಯಮ೦ತ್ರಿಯವರಿಗೆ ಕರುಣಾನಿಧಿಯವರು ಈ ರೀತಿ ಹೇಳಿರಬಹುದು “ನೋಡಿ ಸ್ವಾಮಿ, ತಿರು ಪ್ರತಿಮೆ ಉದ್ಗಾಟನೆ ಮಾಡಿ, ನ೦ತರ ನಮಗೆ ಸ೦ತೋಷಕರವಾಗಿ ಬೆಳವಣಿಗೆಗಳು ಕ೦ಡುಬ೦ದಲ್ಲಿ, ಆಮೇಲೆ ನಾವು ಸರ್ವಜ್ಞನ ಪ್ರತಿಮೆ ಇಡಲು ಯೋಚಿಸುತ್ತೇವೆ”. ಇದಕ್ಕೆ ಸೈ ಎ೦ದ ಮುಖ್ಯಮ೦ತ್ರಿಗಳು, ಹಲಸೂರನ್ನ ತಿರುವಳ್ಳುವರ್ ನಗರ ಮಾಡಿ ಧನ್ಯರಾಗಿದ್ದಾರೆ. ಇದೇ ರೀತಿ LTTE ಬೆ೦ಬಲಿಗರು ಬೆ೦ಗಳೂರಿನಲ್ಲಿ ತಲೆಯೆತ್ತುತ್ತಿರುವುದು ಭಯವು೦ಟುಮಾಡುತ್ತಿರುವ ಸ೦ಗತಿ. ಯಡಿಯೂರಪ್ಪನವರು ಭಯೋತ್ಪಾದಕರು “ಪ್ರಭಾಕರನ್ ಅಮರ” ಎ೦ದು ಹೇಳುತ್ತಿರುವಾಗ ಏಕೆ ಸುಮ್ಮನಿದ್ದರು?

  2. ದೇವೇಶ್ ಅವರೆ,
    ಅದೇ ಪ್ರಕಾರವಾಗಿ, ಕರುಣಾನಿಧಿ ಕೂಡ ಭವಿಷ್ಯದಲ್ಲಿ ತಮಿಳುನಾಡಿನ ಕನ್ನಡಿಗರ ಓಟು ಪಡೆಯಲು ಕೂಡ ಪ್ರಯತ್ನಿಸುತ್ತಿದ್ದಿರಬಹುದೇ?

    ಹೌದು, ನೀವು ಹೇಳಿದ ಹಾಗೆ, ಪ್ರಭಾಕರನ್ ಅಮರ ಎಂಬ ಸಂದೇಶ ಹೊತ್ತವರು ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಯಾರು ಕೂಡ ಚಕಾರವೆತ್ತದಿರುವುದು ಚೋದ್ಯವೇ ಸರಿ.

LEAVE A REPLY

Please enter your comment!
Please enter your name here