ನಿಮಗಿಷ್ಟ ಯಾವುದು?

ಪ್ರೀತಿಯ ಕನ್ನಡಿಗರಲ್ಲಿ ಒಂದು ಮನವಿ.

ಕನ್ನಡ ಕಂಪು ಇಂಟರ್ನೆಟ್ಟಿನಲ್ಲಿ ಹರಡುತ್ತಾ ಇದೆ. ಹೆಚ್ಚು ಹೆಚ್ಚು ಮಂದಿ ನೆಟ್ಟಿಗೆ ಆತುಕೊಳ್ಳತೊಡಗಿದ್ದಾರೆ. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಇಂಟರ್ನೆಟ್ಟೇ ತಮ್ಮ ತವರುನಾಡನ್ನು ಬೆಸೆಯುವ ಬಂಧವಾಗಿಬಿಟ್ಟಿದೆ. ಇಂಟರ್ನೆಟ್ಟಿನಲ್ಲಿ ಕನ್ನಡದ ಸುಮವು ಗಂಧ ಸೂಸುವುದರಿಂದ ಊರಿಂದ ದೂರಾದ ಬೇಸರ ಕಳೆಯುವವರಿದ್ದಾರೆ.

ಹೀಗಾಗಿ, ಯಾವುದೇ ಒಂದು ಕನ್ನಡ ವೆಬ್ ಸೈಟಿನಲ್ಲಿ ಸುದ್ದಿಯ ಹೊರತಾಗಿ ನಿಮಗೆ ಆತ್ಮೀಯವಾಗುವ, ಮನರಂಜಿಸುವ, ಮನಸ್ಸನ್ನು ಪ್ರಫುಲ್ಲಿತಗೊಳಿಸುವ ಬರಹಗಳು ಯಾವುವು ಎಂಬುದನ್ನು ತಿಳಿಸಬಲ್ಲಿರೇ?

ದಟ್ಸ್ ಕನ್ನಡ, ಯಾಹೂ, ಎಂಎಸ್ಎನ್, ಪ್ರಕಾಶಕ ,ಕನ್ನಡಸಾಹಿತ್ಯ ಡಾಟ್ ಕಾಮ್, ಸಂಪದ, ವಿಕ್ರಾಂತ ಕರ್ನಾಟಕ, ಕನ್ನಡಆಡಿಯೋ, ಸೇರಿದಂತೆ ಇಂಟರ್ನೆಟ್ಟಿನಲ್ಲಿ ಕನ್ನಡ ಕಂಪನ್ನು ಪಸರಿಸುತ್ತಿರುವ ಸೈಟುಗಳಲ್ಲಿ ನಿಮಗೆ ಯಾವ ವಿಷಯಗಳು, ಲೇಖನಗಳು ಅಥವಾ ಯಾರ ಬರಹಗಳು ಇಷ್ಟವಾದವು? ಅದು ಕಥೆಯಾಗಿರಬಹುದು, ಕವನವಾಗಿರಬಹುದು, ಹಾಡುಗಳು, ಸಿನಿಮಾ ವಿಭಾಗ, ಆರೋಗ್ಯ, ಸಿನಿಮಾ ಚಿತ್ರಗಳು ಆಗಿರಬಹುದು.

ಇದರೊಂದಿಗೆ ಬೇರೆ ಭಾಷಾ ವೆಬ್ ಸೈಟುಗಳಿಗೆ ಹೋಲಿಸಿದರೆ, ಕನ್ನಡ ತಾಣಗಳಲ್ಲಿ ಇರುವ ಕೊರತೆ ಏನು, ಏನು ಇರಬೇಕು ಎಂಬುದನ್ನೂ ತಿಳಿಯಪಡಿಸಲು ಕೋರಿಕೆ. 

ದಯವಿಟ್ಟು ತಿಳಿಸುವಿರಾ?
-ಧನ್ಯವಾದ

2 thoughts on “ನಿಮಗಿಷ್ಟ ಯಾವುದು?

  1. ಬಚ್ಚೋಡಿ ಅವರೆ,
    ನೋಡಿದೆ. ಕನ್ನಡ ಭಾಷಾ ಪ್ರಯೋಗ/ಬಳಕೆ ಬಗ್ಗೆ ಚೆನ್ನಾಗಿಯೇ ವಿಶ್ಲೇಷಿಸಿದ್ದೀರಿ.

Leave a Reply

Your email address will not be published. Required fields are marked *