ಟೆಕ್ ಟಾನಿಕ್: ಜಿಮೇಲ್ ಲಾಗಿನ್‌ನಲ್ಲಿ ಬದಲಾವಣೆ

0
684

ನೀವು ಜಿಮೇಲ್‌ಗೆ ಲಾಗಿನ್ ಆಗಬೇಕಿದ್ದರೆ ಇತ್ತೀಚೆಗೆ ಲಾಗಿನ್ ಪುಟದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ನೀವು ಕಂಡಿದ್ದೀರಿ. ಪಾಸ್‌ವರ್ಡ್‌ಗೆ ಮತ್ತಷ್ಟು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೂಗಲ್ ಈ ಬದಲಾವಣೆ ಮಾಡಿದೆ. ಲಾಗಿನ್ ಪ್ರಕ್ರಿಯೆಯನ್ನು ವಿಭಜಿಸಲಾಗಿದೆ. ಮೊದಲ ಸ್ಕ್ರೀನ್‌ನಲ್ಲಿ ನಿಮ್ಮ ಲಾಗಿನ್ ಐಡಿ (ಬಳಕೆದಾರ ಹೆಸರು) ನಮೂದಿಸಬೇಕಾಗುತ್ತದೆ, ಎರಡನೇ ಪುಟದಲ್ಲಿ ಪಾಸ್‌ವರ್ಡ್ ಸೇರಿಸಲು ಅವಕಾಶ ನೀಡಲಾಗಿದೆ. ಇದರ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವು ಬಳಕೆದಾರರು, ಲಾಗಿನ್ ಆಗಲು ಹೆಚ್ಚಿನ ಸಮಯ, ಶ್ರಮ ವ್ಯರ್ಥವಾಗುತ್ತಿದೆ ಎಂದು ದೂರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here