ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರ ನಕಲಿ ಮಾಡಿದ್ರೆ ನೋಟಿಫಿಕೇಶನ್

ನಿಮ್ಮದೇ ಚಿತ್ರವನ್ನು ಬೇರೆಯವರು ಪ್ರೊಫೈಲ್ ಚಿತ್ರವಾಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ವ್ಯವಹರಿಸುತ್ತಿದ್ದಾರೆಯೇ? ಈ ಕುರಿತ ಹಲವಾರು ದೂರುಗಳನ್ನು ಪರಿಗಣಿಸಿರುವ ಫೇಸ್‌ಬುಕ್, ಇದೀಗ ನಿಮ್ಮ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿದರೆ ನಿಮಗೆ ನೋಟಿಫಿಕೇಶನ್ ಮೂಲಕ ತಿಳಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸುತ್ತಿದೆ. ಅದೇ ರೀತಿ, ಯಾರಾದರೂ ನಿಮ್ಮ ಫೋಟೋ ಅಪ್‌ಲೋಡ್ ಮಾಡಿದರೆ, ಅವರು ನಿಮಗೆ ಟ್ಯಾಗ್ ಮಾಡದಿದ್ದರೂ ಕೂಡ, ನಿಮಗೆ ನೋಟಿಫಿಕೇಶನ್ ಮೂಲಕ ಎಚ್ಚರಿಸುವ ವ್ಯವಸ್ಥೆ ಬರಲಿದೆ. ಮುಖ ಗುರುತಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವ್ಯಕ್ತಿಗಳ ಪ್ರೊಫೈಲ್ ಚಿತ್ರವನ್ನು ವೀಕ್ಷಿಸಿ ನೆನಪಿಟ್ಟುಕೊಳ್ಳುವುದರಿಂದ ಇದು ಸಾಧ್ಯವಾಗಲಿದೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯುವವರಿಗೆ ಇದು ಕಡಿವಾಣ ಹಾಕುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಈ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಫೇಸ್‌ಬುಕ್ ಘೋಷಿಸಿದೆ.

Leave a Reply

Your email address will not be published. Required fields are marked *