ಇತ್ತೀಚೆಗೆ ಟೆಲಿಕಾಂ ಕಂಪನಿಗಳ ನಡುವಿನ ಸಂಪರ್ಕಕ್ಕೆ ಇದ್ದ ಅಂತರ್-ಸಂಪರ್ಕ ಶುಲ್ಕವನ್ನು (ಐಯುಸಿ- ಇಂಟರ್-ಕನೆಕ್ಟ್ ಯೂಸೇಜ್ ಚಾರ್ಜ್) ಕಡಿತಗೊಳಿಸಿದ ಸುದ್ದಿ ಓದಿದ್ದೀರಿ. ಇದರಿಂದ ಕರೆ ದರಗಳು ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ. ಏನಿದು ಅಂತ ಗೊತ್ತೇ? ಒಂದು ಟೆಲಿಕಾಂ ಕಂಪನಿಯ ಕರೆಯೊಂದು ಬೇರೊಂದು ಟೆಲಿಕಾಂ ಸೇವಾದಾತ ಕಂಪನಿಯ ನೆಟ್‌ವರ್ಕ್‌ಗೆ (ಸುಲಭವಾಗಿ ಉದಾಹರಣೆ ಹೇಳುವುದಿದ್ದರೆ, ಏರ್‌ಟೆಲ್‌ನಿಂದ ಜಿಯೋಗೆ) ಹೋಗುತ್ತದೆಯೆಂದಾದರೆ, ಅದಕ್ಕೆ ಮೊದಲನೆ ಕಂಪನಿಯು ಎರಡನೇ ಕಂಪನಿಗೆ ನಿಮಿಷಕ್ಕೆ ಇದುವರೆಗೆ 14 ಪೈಸೆ ಕೊಡಬೇಕಾಗುತ್ತಿತ್ತು. ಈಗ ಅದನ್ನು 6 ಪೈಸೆಗೆ ಇಳಿಸಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯೋಜನೆಯ ಪ್ರಕಾರ, 2020ರಲ್ಲಿ ಇದು ಶುಲ್ಕರಹಿತವಾಗಲಿದೆ. ಆದರೆ, ಟೆಲಿಕಾಂ ಸೇವಾ ಕಂಪನಿಗಳು ಯಾರ ಕರೆ ಎಲ್ಲಿಗೆ ಹೋಯಿತು ಎಂಬುದರ ದಾಖಲೆ ಇರಿಸಿಕೊಳ್ಳಬೇಕಾಗುತ್ತದೆ.
ಇವನ್ನೂ ನೋಡಿ
ನಿಮಗಿದು ತಿಳಿದಿರಲಿ: Dark Web ಎಂಬ ಕಳ್ಳ ಕಿಂಡಿ
ತಂತ್ರಜ್ಞಾನ ಜಗತ್ತು ಆಧುನೀಕರಣಗೊಂಡಂತೆ ಪೈರಸಿ, ನಕಲು, ಡ್ರಗ್ಸ್, ಅಕ್ರಮ ದಂಧೆ, ಕಳ್ಳ ವ್ಯವಹಾರಗಳು, ಹವಾಲ… ಇವೆಲ್ಲವು ಕೂಡ ಆಧುನೀಕರಣಗೊಳ್ಳುತ್ತಿವೆ. ಇತ್ತೀಚೆಗೆ ಬಾಲಿವುಡ್ನಿಂದ ತೊಡಗಿ ನಮ್ಮ ಕನ್ನಡದ ಸ್ಯಾಂಡಲ್ವುಡ್ ತನಕ...





