ಹೊಸ ಫೋನ್ ಕೊಂಡಿದ್ದರೆ, ಅದರ ಇಂಟರ್ನಲ್ ಮೆಮೊರಿ ಹಾಗೂ ಮೆಮೊರಿ ಕಾರ್ಡ್‌ನಲ್ಲಿರುವ ಎಲ್ಲ ಫೈಲುಗಳೂ ಹೊಸ ಫೈಲಿನಲ್ಲಿ ಬೇಕೇ? ಆಡಿಯೋ, ವೀಡಿಯೋ, ಫೋಟೋ, ಸಂಪರ್ಕ ಸಂಖ್ಯೆಗಳು ಮುಂತಾದ ಯಾವುದೇ ಫೈಲುಗಳನ್ನು ಒಂದು ಮೊಬೈಲ್‌ನಿಂದ ಮತ್ತೊಂದಕ್ಕೆ ವರ್ಗಾಯಿಸಲು ಶೇರ್‌ಇಟ್, ಫೈಲ್ ಟ್ರಾನ್ಸ್‌ಫರ್ ಮುಂತಾದ ಆ್ಯಪ್‌ಗಳಿವೆ. ಆದರೆ ಕಂಪ್ಯೂಟರ್ ಮೂಲಕವೂ ಇವೆಲ್ಲವನ್ನೂ ಏಕಕಾಲದಲ್ಲಿ ವರ್ಗಾಯಿಸಬಹುದು. ಇದಕ್ಕೆ MobileTrans ಎಂಬ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಉಚಿತವಾಗಿ ಲಭ್ಯ (ಟ್ರಯಲ್ ವರ್ಷನ್). ಇನ್‌ಸ್ಟಾಲ್ ಆದ ಬಳಿಕ ಎರಡೂ ಮೊಬೈಲ್ ಫೋನ್‌ಗಳನ್ನು ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರಿಗೆ ಸಂಪರ್ಕಿಸಿ, ಈ ತಂತ್ರಾಂಶವನ್ನು ರನ್ ಮಾಡಿದರೆ, ಎರಡೂ ಮೊಬೈಲ್‌ಗಳಲ್ಲಿರುವ ಯಾವುದೇ ಫೈಲುಗಳನ್ನು ಒಂದರಿಂದ ಮತ್ತೊಂದಕ್ಕೆ ಪರಸ್ಪರ ವರ್ಗಾಯಿಸಬಹುದಾಗಿದೆ.
ಇವನ್ನೂ ನೋಡಿ
ನವ ವಸಂತದಲಿ ಬದುಕು ‘ನಂದನ’ವನವಾಗಲಿ!
ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಅಂತೆಯೇ ಇದು ಯಾವುದೇ ಪಾಶ್ಚಾತ್ಯ ಅಂಧಾನುಕರಣೆಯ ಹಬ್ಬದಾಚರಣೆಯಲ್ಲ, ಇದರಲ್ಲಿ 'ನಮ್ಮ' ಎಂಬೋ ಆಪ್ತ ಭಾವವು ಮೇಳೈಸಿರುವುದರಿಂದ, ಈ ಯಾಂತ್ರಿಕ ಯುಗದಲ್ಲಿಯೂ ಇದನ್ನು ಸಂಭ್ರಮಿಸುವಾಗ ಸು-ಲಭವಾಗುವ ಮನರಂಜನೆ,...