ನಿಮ್ಮ ಮೊಬೈಲ್ ಫೋನ್‌ನಲ್ಲಿ ಕೆಲವೊಮ್ಮೆ ಆ್ಯಪ್‌ಗಳನ್ನು ತೆರೆದಾಗ ಓಪನ್ ಆಗದಿರುವುದು, ನೀವು ಕಳುಹಿಸಿದ ವಾಟ್ಸಾಪ್ ಸಂದೇಶಗಳು ಪೋಸ್ಟ್ ಆಗದಿರುವುದು, ಮೊಬೈಲ್ ಹ್ಯಾಂಗ್ ಆಗುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆಯೇ? ಇಂಥವಕ್ಕೆ ಕೆಲವೊಮ್ಮೆ ಸುಲಭವಾದ ಪರಿಹಾರವೆಂದರೆ, ಮೊಬೈಲ್ ಫೋನನ್ನು ರೀಸ್ಟಾರ್ಟ್ ಮಾಡುವುದು. ಪವರ್ ಬಟನ್ ಒತ್ತಿ ಹಿಡಿದಾಗ ರೀಸ್ಟಾರ್ಟ್ ಆಯ್ಕೆ ಗೋಚರಿಸುತ್ತದೆ. ಇದು ಹಿನ್ನೆಲೆಯಲ್ಲಿ ರನ್ ಆಗುತ್ತಿರುವ ಆ್ಯಪ್‌ಗಳನ್ನು ಅಥವಾ ಬೇರೆ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸಿ, ಮೊಬೈಲ್ ಫೋನ್‌ಗೆ ಫ್ರೆಶ್‌ನೆಸ್ ನೀಡುತ್ತದೆ. ವಾರಕ್ಕೊಮ್ಮೆ ರೀಸ್ಟಾರ್ಟ್ ಮಾಡುವುದು ಅತ್ಯಂತ ಸೂಕ್ತ. ಇದು ಬ್ಯಾಟರಿ ಬಾಳಿಕೆಗೆ ಕೂಡ ನೆರವಾಗುತ್ತದೆ.
ಇವನ್ನೂ ನೋಡಿ
ನಿಮ್ಮ ಡಾಕ್ಯುಮೆಂಟ್ಗಳನ್ನು ಉಚಿತವಾಗಿ ಪಿಡಿಎಫ್ಗೆ ಪರಿವರ್ತಿಸಿ
ಮಾಹಿತಿ@ತಂತ್ರಜ್ಞಾನ – 34 (ಮೇ 13, 2013ರ ವಿಜಯ ಕರ್ನಾಟಕ ಅಂಕಣ) ಹೊಸದಾಗಿ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ ಕೊಂಡಾಗ ಅದರಲ್ಲಿ ಸೀಮಿತ ಸಾಫ್ಟ್ವೇರ್ಗಳಷ್ಟೇ ಇರುತ್ತವೆ. ನಮಗೆ ಬೇಕಾದ ತಂತ್ರಾಂಶಗಳನ್ನು ನಾವೇ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವು...