ನಿಮ್ಮ ಮೊಬೈಲ್ ಫೋನ್‌ನಲ್ಲಿ ಕೆಲವೊಮ್ಮೆ ಆ್ಯಪ್‌ಗಳನ್ನು ತೆರೆದಾಗ ಓಪನ್ ಆಗದಿರುವುದು, ನೀವು ಕಳುಹಿಸಿದ ವಾಟ್ಸಾಪ್ ಸಂದೇಶಗಳು ಪೋಸ್ಟ್ ಆಗದಿರುವುದು, ಮೊಬೈಲ್ ಹ್ಯಾಂಗ್ ಆಗುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆಯೇ? ಇಂಥವಕ್ಕೆ ಕೆಲವೊಮ್ಮೆ ಸುಲಭವಾದ ಪರಿಹಾರವೆಂದರೆ, ಮೊಬೈಲ್ ಫೋನನ್ನು ರೀಸ್ಟಾರ್ಟ್ ಮಾಡುವುದು. ಪವರ್ ಬಟನ್ ಒತ್ತಿ ಹಿಡಿದಾಗ ರೀಸ್ಟಾರ್ಟ್ ಆಯ್ಕೆ ಗೋಚರಿಸುತ್ತದೆ. ಇದು ಹಿನ್ನೆಲೆಯಲ್ಲಿ ರನ್ ಆಗುತ್ತಿರುವ ಆ್ಯಪ್‌ಗಳನ್ನು ಅಥವಾ ಬೇರೆ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸಿ, ಮೊಬೈಲ್ ಫೋನ್‌ಗೆ ಫ್ರೆಶ್‌ನೆಸ್ ನೀಡುತ್ತದೆ. ವಾರಕ್ಕೊಮ್ಮೆ ರೀಸ್ಟಾರ್ಟ್ ಮಾಡುವುದು ಅತ್ಯಂತ ಸೂಕ್ತ. ಇದು ಬ್ಯಾಟರಿ ಬಾಳಿಕೆಗೆ ಕೂಡ ನೆರವಾಗುತ್ತದೆ.
ಇವನ್ನೂ ನೋಡಿ
iPhone 12 Mini Review | ವಾಮನ ರೂಪದ ತ್ರಿವಿಕ್ರಮ
ಆ್ಯಪಲ್ ಯಾವತ್ತೂ ಪ್ರಯೋಗಶೀಲತೆಗೆ ಪ್ರಸಿದ್ಧಿ. 6 ಇಂಚಿಗಿಂತಲೂ ದೊಡ್ಡದಾದ ಸ್ಕ್ರೀನ್ನ ಸ್ಮಾರ್ಟ್ ಫೋನ್ಗಳು ಈಗಿನ ಟ್ರೆಂಡ್ ಆಗಿದ್ದರೂ, ಸಣ್ಣ ಸ್ಕ್ರೀನ್ನ ಮೊಬೈಲ್ ಸಾಧನ ಪರಿಚಯಿಸುವ ಮೂಲಕ ಆ್ಯಪಲ್, ಆ ವಲಯವನ್ನು...