ಟೆಕ್‌ಟಾನಿಕ್: ಬ್ಲೂವೇಲ್ ಅನ್ನೋದು ಗೇಮ್ ಅಲ್ಲ, ಅದು ಸಾವಿನಾಟ

ಮಾಧ್ಯಮಗಳಲ್ಲಿ ಎಷ್ಟೇ ವರದಿಯಾಗಿದ್ದರೂ, ಜನ ಜಾಗೃತಿ ಇನ್ನೂ ಮೂಡಿಲ್ಲವೆಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತಿದೆ. ಬ್ಲೂವೇಲ್ ಎಂಬ ಹೆಸರಿನಲ್ಲಿ ಈಗ ಸುದ್ದಿ-ಸದ್ದು ಆಗುತ್ತಿರುವುದು ಒಂದು ‘ಗೇಮ್’ ಎಂಬುದು ದಿಟವಾದರೂ, ಇದು ಡೌನ್‌ಲೋಡ್ ಮಾಡಿಕೊಂಡು ಆಡುವಂತಹಾ ಆಟ ಅಲ್ಲವೇ ಅಲ್ಲ. ಆನ್‌ಲೈನ್‌ನಲ್ಲಿರುವಾಗ, ಮಾನಸಿಕವಾಗಿ ಕುಗ್ಗಿರುವವರನ್ನೇ ಗುರಿಯಾಗಿಟ್ಟುಕೊಂಡು, ಅವರನ್ನು ಪರಿಚಯ ಮಾಡಿಕೊಂಡು, ಬಳಿಕ ಫೋನ್, ಮೆಸೇಜ್ ಮೂಲಕ ಸಂಪರ್ಕಿಸಿ ಆಟ ಆಡಿಸುವ, ಕೊನೆಗೆ ಆತ್ಮಹತ್ಯೆಗೆ ಪ್ರೇರೇಪಿಸುವ ಕೊಲ್ಲುವ ಆಟ. ಬ್ಲೂವೇಲ್ ಎಂಬುದು ಆತ್ಮಹತ್ಯೆಯ ಅಥವಾ ಸಾವಿನ ಆಟ ಅಂತಲೂ ಕರೆಯಬಹುದು. ‘ನಿಷ್ಪ್ರಯೋಜಕರು ಜಗತ್ತಿನಲ್ಲಿರಬಾರದು’ ಎಂಬ ಕಾರಣಕ್ಕೇ ಬ್ಲೂವೇಲ್ ಎಂಬ ಆನ್‌ಲೈನ್ ಸಾವಿನಾಟ ಸೃಷ್ಟಿಸಿದ್ದೇನೆ ಅಂತ ಅದನ್ನು ಪರಿಚಯಿಸಿದ ವ್ಯಕ್ತಿ ಹೇಳಿಕೊಂಡಿದ್ದಾನೆ. ನೆನಪಿಡಿ.

Leave a Reply

Your email address will not be published. Required fields are marked *