ಸ್ಮಾರ್ಟ್ ಫೋನ್ ಬಂದಾಗಿನಿಂದ ಕನ್ನಡಕಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಬಹುಶಃ ಎಲ್ಲರ ಗಮನಕ್ಕೆ ಬಂದಿರಬಹುದು. ಮಕ್ಕಳು ಸಣ್ಣ ವಯಸ್ಸಿನಲ್ಲೇ ಅವಿರತವಾಗಿ ಗೇಮ್ಸ್ ಆಡುತ್ತಾ ಫೋನ್ ಸ್ಕ್ರೀನ್‌ನ ಬೆಳಕಿಗೆ ಕಣ್ಣನ್ನು ಹೆಚ್ಚು ಹೊತ್ತು ಒಡ್ಡುವುದರಿಂದ ಕಣ್ಣಿಗೆ ಹಾನಿಯಾಗುವುದು ಸಾಕಷ್ಟು ಸಂಶೋಧನೆಗಳಿಂದ ದೃಢಪಟ್ಟಿದೆ. ಇದಕ್ಕೆ ಕಾರಣ, ಸ್ಕ್ರೀನ್‌ನಿಂದ ಹೊರ ಸೂಸುವ ಬ್ಲೂ ರೇ ಅಥವಾ ನೀಲ ಕಿರಣಗಳು. ಕಣ್ಣುಗಳಿಗೆ ಒಂದಿಷ್ಟಾದರೂ ರಕ್ಷಣೆ ನೀಡಲೆಂದು ಹೆಚ್ಚಿನ ಫೋನ್ ತಯಾರಿಕಾ ಕಂಪನಿಗಳು ಈಗ ವ್ಯವಸ್ಥೆ ಮಾಡಿಕೊಂಡಿವೆ. ಅದನ್ನು ಬಳಸಿಕೊಳ್ಳಿ. ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಡಿಸ್‌ಪ್ಲೇ ಎಂಬಲ್ಲಿಗೆ ಹೋಗಿ ನೋಡಿದರೆ, ಅಡಾಪ್ಟಿವ್ ಬ್ರೈಟ್‌ನೆಸ್, ಆಟೋ ಬ್ರೈಟ್‌ನೆಸ್ ಅಥವಾ ಇದೇ ಅರ್ಥ ಬರುವ ಬೇರೆ ಯಾವುದಾದರೂ ಹೆಸರಿನ ಒಂದು ಮೆನು ಇರುತ್ತದೆ (ಫೋನ್ ಬ್ರ್ಯಾಂಡ್‌ಗೆ ಅನುಸಾರವಾಗಿ ಹೆಸರು ಬದಲಾವಣೆ ಇರಬಹುದು.) ಅದನ್ನು ಆನ್ ಮಾಡಿಟ್ಟುಕೊಳ್ಳಿ. ಕಣ್ಣುಗಳನ್ನು ರಕ್ಷಿಸಿಕೊಳ್ಳಿ.
ಇವನ್ನೂ ನೋಡಿ
ಪಾಸ್ವರ್ಡ್ ಕೊಡದೆಯೇ ಬೇರೊಬ್ಬರಿಗೆ ಜಿಮೇಲ್ Access ನೀಡುವುದು ಹೇಗೆ?
ಹೆಚ್ಚಿನವರು ಗೂಗಲ್ನ ಉಚಿತ ಇಮೇಲ್ ಸೇವೆ 'ಜಿಮೇಲ್' ಬಳಸುತ್ತಿದ್ದಾರೆ. ಸಂವಹನಕ್ಕೆ ಮಾತ್ರವಲ್ಲದೆ, ಇದು ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಿಗಂತೂ ಅತ್ಯುತ್ತಮ ಅನಿವಾರ್ಯ ಇ-ಸಂಪರ್ಕ ವಿಳಾಸವಾಗಿಯೂ ಕೆಲಸ ಮಾಡುತ್ತದೆ. ಜಿಮೇಲ್ ಇದ್ದರೆ ಹೊಸದಾಗಿ ಕೊಂಡ ಆಂಡ್ರಾಯ್ಡ್...