ಯಾಹೂ ಖರೀದಿಗೆ ಮುಂದಾದ ಮೈಕ್ರೋಸಾಫ್ಟ್!

4
263

ಇದೀಗ ಬಂದ ಸುದ್ದಿ. ಯಾಹೂವನ್ನು ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆ.

ಅಂತರ್ಜಾಲ ಜಗತ್ತಿನ ದೈತ್ಯ ಶಕ್ತಿಗಳ ನಡುವಣ ಕದನ ಮತ್ತೊಂದು ಮುಖ ಹೊರಳಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಣ ಕದನ ಕ್ರಾಂತಿಕಾರಿ ರೂಪ ತಾಳುತ್ತಿದ್ದು, ಇದೀಗ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ ಪ್ರಕಾರ, ಯಾಹೂವನ್ನು 44.6 ಶತಕೋಟಿ ಡಾಲರ್ ನೀಡಿ ಖರೀದಿಸಲು ಮೈಕ್ರೋಸಾಫ್ಟ್ ಸಂಸ್ಥೆ ಮುಂದಾಗಿದೆ.

ಈ ಖರೀದಿ ಅಂತಿಮಗೊಂಡಲ್ಲಿ, ವಾರ್ನರ್-ಅಮೆರಿಕ ಆನ್‌ಲೈನ್ (ಎಒಎಲ್) ವಿಲೀನದ ಬಳಿಕದ ಅತ್ಯಂತ ದೊಡ್ಡ ಅಂತರ್ಜಾಲ ವಿಲೀನ ಪ್ರಕ್ರಿಯೆ ಇದಾಗಲಿದೆ.

ಇತ್ತೀಚೆಗೆ ಯಾಹೂ ಸಂಸ್ಥೆಯು ನಷ್ಟ ಅನುಭವಿಸುತ್ತಿದ್ದು, ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕಡಿತವನ್ನೂ ಘೋಷಿಸಿತ್ತು. ಯಾಹೂ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಒಂದುಗೂಡಿದಲ್ಲಿ ಜನಪ್ರಿಯವಾಗಿರುವ ಗೂಗಲ್‌ಗೆ ಪ್ರತಿಸ್ಪರ್ಧೆ ಒಡ್ಡಲು ನೂರಾನೆ ಬಲ ಬಂದಂತಾಗುತ್ತದೆ.

4 COMMENTS

  1. ವಿಚಿತ್ರವೋ, ಇದುವೇ ಸತ್ಯವೋ ಅರಿಯದು. ನಿಮ್ಮ ತಾಣದ ಪಂಚ್‍‌ಲೈನ್‌ಗೂ ಮತ್ತು ಯಾಹೂ ಖರೀದಿಗೆ ಮುಂದಾಗುತ್ತಿರುವ ಮೈಕ್ರೊಸಾಫ್ಟ್ ಸುದ್ದಿಗೂ ಸರಿಯಾದ ಹೊಂದಾಣಿಕೆಯಾಗಿದೆ.

    ಮನುಷ್ಯನ ತರವೇ ಮಾನವ ನಿರ್ಮಿತ ಈ ಕಂಪನಿಗಳು ಡಿವಿಜಿಯವರ ಇದ್ದುದೆಲ್ಲವ ಬಿಟ್ಟು… ತತ್ವವನ್ನು ಅಳವಡಿಸಿಕೆಗೆ ಮುಂದೆ ಬರುತ್ತಿರುವುದು. ಖುಷಿಯ ಸಂಗತಿ. ಆದರೆ ಡಿವಿಜಿಯವರ ಎಲ್ಲ ತಾತ್ವಿಕತೆಯನ್ನು ಈ ಕಾರ್ಪೋರೆಟ್ ಜಗತ್ತು ಒಪ್ಪಿಕೊಳ್ಳಬಲ್ಲದೆ ಅದು ಸಂಶಯ. ಯಾಕೋ ಈ ಸುದ್ದಿ ಓದಿದ ಮೇಲೆ ಮಧುರ್ ಬಂಡಾರಕರ್ ಅವರ “ಕಾರ್ಪೋರೆಟ್ ” ನೆನಪಿಗೆ ಬಂತು. ಅದರಲ್ಲಿ ಕಂಪನಿಯನ್ನು ಉಳಿಸಿಕೊಳ್ಳುವುದಕ್ಕೆ ಭಾವುಕ ನಾಯಕ ಆಗಿರುವ ಅಪರಾಧವನ್ನು ತನ್ನ ಮೇಲೆ ಹಾಕಿಕೊಂಡಿದ್ದು. ಆಮೇಲೆ ಅವಳನ್ನು ರಕ್ಷಿಸಲು ಈ ಕಾರ್ಪೋರೆಟ್ ಜಗತ್ತು ಮುಂದೆ ಬರದೆ ಬಲಿ ಪಶು ಮಾಡಿದ್ದು ಒಂದು ಕಥೆಯಾದರೆ ಸಣ್ಣ ಮೀನನ್ನು ದೊಡ್ಡ ಮೀನು ತಿನ್ನುವುದು ನಿಸರ್ಗ ನಿಯಮ ಮತ್ತು ಕಾರ್ಪೋರೆಟ್ ಜಗತ್ತಿನಲ್ಲಿ ನಷ್ಟದ ಕಂಪನಿ ಲಾಭದ ಕಂಪನಿಗೆ ಮಾರಾಟವಾಗುವುದು ವಿಶೇಷವೆನಲ್ಲ.

  2. ಇವೆಲ್ಲವೂ ಆಕಾಶದಲ್ಲಿ ನಡೆಯುತ್ತಿರುವ ದೇವತೆಗಳ ಯುದ್ಧದಂತೆ ನಾವು ನೆಲದ ಮೇಲೆ ನಿಂತು ನೋಡಬಹುದು ಅಷ್ಟೇ!!

  3. @ ಸತೀಶ್,
    ಇತ್ತೀಚೆಗೆ ಬಂದ ಸುದ್ದಿ ಪ್ರಕಾರ, ಯಾಹೂ ಈ ಆಫರ್ ತಿರಸ್ಕರಿಸಿದೆ. ಮತ್ತು ಮೈಕ್ರೋಸಾಫ್ಟ್ ತೆಕ್ಕೆಗೆ ಹೋಗುವ ಬದಲು ಅಮೆರಿಕದ ಮತ್ತೊಂದು ಸಾಫ್ಟ್‌ವೇರ್ ದೈತ್ಯ ಎಒಎಲ್‌ನತ್ತ ವಾಲತೊಡಗಿದೆ. ಒಟ್ಟಿನಲ್ಲಿ ಹೆಚ್ಚು ಹಣಕ್ಕೆ ತನ್ನನ್ನು ಒಡ್ಡಿಕೊಂಡು, ನಷ್ಟದಲ್ಲೂ ಲಾಭ ಮಾಡಿಕೊಳ್ಳುವ ತಂತ್ರವಿದು.

  4. @ ಸುಪ್ರೀತ್,

    ನಮ್ಮ ತಾಣಕ್ಕೆ ಸ್ವಾಗತ.

    ಆಗಸದಲ್ಲಿ ನಡೆಯೋ ಯುದ್ಧವಾದರೂ, ಜನಸಾಮಾನ್ಯರಿಗೂ ಇದರ ಪರಿಣಾಮ ತಿಳಿದೇ ತಿಳಿಯುತ್ತೆ. ಯಾಕಂದ್ರೆ ಸಾಫ್ಟ್‌ವೇರ್ ದೈತ್ಯರ ಸ್ಪರ್ಧೆಯಿಂದಾಗಿಯೇ ಒಳ್ಳೊಳ್ಳೆಯ ಗುಣಮಟ್ಟದ ಸೇವೆ ದೊರೆಯುತ್ತಿದೆ ಅನ್ನೋದಂತು ಹಲವು ಸಂದರ್ಭಗಳಲ್ಲಿ ಈಗಾಗಲೇ ಸಾಬೀತಾಗಿದೆ.

LEAVE A REPLY

Please enter your comment!
Please enter your name here