ಟೆಕ್ ಟಾನಿಕ್: FB ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್

0
330

ಆ್ಯಪಲ್ ಐಫೋನ್ ಇರುವವರಿಗೆ ಆ್ಯಪಲ್ ಮ್ಯೂಸಿಕ್ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್ ಬಾಟ್ ಅನ್ನು ಆ್ಯಪಲ್ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್ ಅಂತ ಸರ್ಚ್ ಮಾಡಿದಾಗ ಸಿಗುವ ಫ್ರೆಂಡ್ ಇದು. ಅದಕ್ಕೆ ಕ್ಲಿಕ್ ಮಾಡಿದಾಗ, ಯಾವ ಮ್ಯೂಸಿಕ್ ಬೇಕೂಂತ ಮೆಸೆಂಜರ್‌ನಲ್ಲೇ ಕೇಳುತ್ತದೆ. ನೀವು, ಯೇಸುದಾಸ್ ಅಂತ ಟೈಪ್ ಮಾಡಿದರೆ, ಯೇಸುದಾಸ್ ಹಾಡಿದ ಹಾಡುಗಳ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತದೆ. ಅದರ ಮೇಲೆ ಕ್ಲಿಕ್ ಮಾಡಬಹುದು, ಅದನ್ನು ಅಲ್ಲಿಂದಲೇ ಸ್ನೇಹಿತರೊಂದಿಗೆ ಶೇರ್ ಮಾಡಬಹುದು. ಆ್ಯಪಲ್ ಮ್ಯೂಸಿಕ್ ಚಂದಾದಾರರಲ್ಲದಿದ್ದವರಿಗೆ ಕೇವಲ 30 ಸೆಕೆಂಡುಗಳ ಕಾಲ ಉಚಿತವಾಗಿ ಹಾಡು ಕೇಳಲು ಮಾತ್ರ ಸಾಧ್ಯ. ಇದು ಆ್ಯಪಲ್ ಐಫೋನ್ ಅಲ್ಲದೆ, ಆಂಡ್ರಾಯ್ಡ್ ಫೋನ್‌ನಲ್ಲಿಯೂ ಲಭ್ಯವಿದೆ.

LEAVE A REPLY

Please enter your comment!
Please enter your name here