ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ?

6
336

ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳು ತೀರಾ ಯೋಚನೆಗೀಡುಮಾಡುವಂತಿವೆಯಲ್ಲಾ…

ಯಾವ ಹಾಡನೋ ಕೇಳಿ
ಇಂತೇಕೆ ತುಡಿವುದೆದೆ?
ಅದಕು ಇದಕು ಏನು ಸಂಬಂಧವೋ !
ತುಂಬಿರುವ ಎದೆ ತನ್ನ
ನೋವುಗಳ ತುಳುಕಾಡ-
ಲೊಂದು ನೆಪವನು ಕಾದು ನಿಲುವುದೇನೋ!

ಬಹುಶಃ ಈ ಕವನ ನಮ್ಮ ಮನಸ್ಸಿನ ಮೇಲೆ ಅಷ್ಟೊಂದು ಗಾಢವಾಗಿ ಆವರಿಸಿಬಿಡುತ್ತದೆ ಎಂಬುದು ಕವಿಗೆ ಗೊತ್ತಿತ್ತೇನೋ…! ಅದಕ್ಕೇ ಈ ಹಾಡನ್ನೇ ‘ಯಾವ ಹಾಡನೋ’ ಎಂದು ಉಲ್ಲೇಖಿಸಿರಬಹುದೇ?

6 COMMENTS

 1. ಕವಿಯೂ ನಿಮ್ಮ ಮನಃಸ್ಥಿತಿಯಲ್ಲಿದ್ದವರೇ ಅಲ್ವೇ? ಅವರ ಮನದಲ್ಲಿ ಮೂಡಿದ್ದು ಕವಿತೆಯಾಗಿ ಹೊರಬಂದಿತು. ಅವರ ಸ್ಥಾನದಲ್ಲಿ ಈಗ ನೀವು, ನಾನು, ಅವರು, ಇವರು ನಿಂತಿದ್ದೇವೆ. ನಮ್ಮಲ್ಲಿಯೂ ಅದೇ ಮನಃಸ್ಥಿತಿ ಇದೆ. ಆದರೆ ನಮಗೆ ಸರಿಯಾಗಿ ವ್ಯಕ್ತಪಡಿಸಲು ಬರೋಲ್ಲ. ನೀವೊಮ್ಮೆ ಯಾಕೆ ಇಂತಹ ತುಮುಲವನ್ನು ಕವನ ರೂಪದಲ್ಲಿ ಹರಿಬಿಡಬಾರದು.
  ಯಾರಿಗ್ಗೊತ್ತು, ನಮ್ಮಲ್ಲಿ ಯಾರನ್ನು ಹಿರಿಕವಿ, ಘನ ಕವಿ, ಮರಿಕಪಿಗಳೆಂದು ಮುಂದಿನ ಪೀಳಿಗೆ ಗುರುತಿಸುವುದೇನೋ?

  ನಾನು ಈ ಕವನವನ್ನು ಓದಿರ್ಲಿಲ್ಲ. ಇದು ಇಷ್ಟೇನೋ ಅಥವಾ ಇನ್ನೂ ಮುಂದುವರೆದಿದೆಯೋ? ಹಾಗಿದ್ದರೆ ಅದರ ಪರಿಚಯವನ್ನೂ ಮಾಡಿಸಿಬಿಡಿ.

  ಕವನವನ್ನಂತೂ ನಿಮ್ಮಿಂದ ನಾನು ನಿರೀಕ್ಷಿಸುತ್ತಿರುವೆ.

  (ನನ್ನ ಯೋಚನೆ: ನಿಮ್ಮಲ್ಲಿ ಯಾವುದೋ ಹುಳುವೊಂದು ಮೆದುಳನ್ನು ಕೊರೆಯುತ್ತಿರುವಂತಿದೆ, ನಾನು ತಪ್ಪೇ? – ಹಾ ಹಾ ಹಾ!)

 2. ಶ್ರೀನಿವಾಸರೆ,
  ನಿಜ ಹೇಳ್ಬೇಕಂದ್ರೆ ಕವಿಗೂ ಅವಿಗೂ ಸಂಬಂಧವೇ ಇಲ್ಲ. ಕಪಿಗೂ ಅವಿಗೂ ಸಂಬಂಧವಿರೋದು ನಿಮಗೆ ಗೊತ್ತಿದೆ. ಅಂದ್ರೆ ಮರ್ಕಟ ಮನಸ್ಸು ಅಲ್ವೇ? 🙂

  ದೊಡ್ಡ ಕವನ ಓದುವ ಅಭ್ಯಾಸ ನನಗೆ ಯಾವತ್ತೂ ಇಲ್ಲ. ಹನಿಗವನಗಳು ಇಷ್ಟವಾಗುತ್ತವೆ ಯಾಕಂದ್ರೆ ದೀರ್ಘವಾಗಿರುವುದಿಲ್ಲವಲ್ಲ. ಅದ್ಕೆ. ಆದರೆ ಇದು ಸಿಕ್ಕಿದ್ದು ಯಾವುದೋ ಒಂದು ಕಾಗದದ ತುಂಡಲ್ಲಿ. ರಪ್ಪನೇ ಕಣ್ಣು ಸೆಳೆದುಕೊಂಡುಬಿಟ್ಟಿತು. ಹಾಗಾಗಿ ಇದರ ಮುಂದೆ-ಹಿಂದೆ ಏನೂ ಗೊತ್ತಾಗಲಿಲ್ಲ.

  ಮತ್ತೆ ಹುಳುವಿನ ಬಗ್ಗೆ ಹೇಳಿದ್ದೀರಿ. ನಿಮ್ಮದು ತಪ್ಪಿಲ್ಲ. ಹುಳುವನ್ನು ಹಾಗೆಯೇ ಸಾಯಲು ಬಿಡಲಾಗುತ್ತಿದೆ. 🙂

 3. ಸೋನಿ
  ಕೆಲವೊಮ್ಮೆ ಚಂಚಲತೆಯಿಂದಾಗಿ ಮನಸ್ಸು ವೀಕ್ ಆದ ಹಾಗೆ ಕಾಣಿಸುತ್ತೆ. ಆದರೆ ಅದು ಹಲವು ಬಾರಿ ನನ್ನನ್ನು ಎಚ್ಚರಿಸಿದ್ದೂ ಇದೆ. ಹಾಗಾಗಿ ಒಂದರೆಕ್ಷಣ ವಿಚಲಿತವಾಗುತ್ತದೆ. ಮತ್ತೆ ಸರಿಹೋಗುತ್ತದೆ.

 4. ಸೋನಿ
  ಹಾಡು ಇಷ್ಟವಾಯಿತೇ? ಗುನುಗುನಿಸುತ್ತಿರುವಂತಿದೆಯಲ್ಲಾ :))

LEAVE A REPLY

Please enter your comment!
Please enter your name here