ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ ಕೆಲವರಿಗಿನ್ನೂ ಸಂದೇಹವಿದೆ. ಅದೆಂದರೆ, ಅರ್ಧ ವ್ಯಂಜನಗಳು ಕೂಡಿಕೊಳ್ಳದಂತೆ ಮಾಡುವುದು ಹೇಗೆ? ಉದಾಹರಣೆಗೆ, ‘ಫೇಸ್‌ಬುಕ್’ ಅಂತ ಬರೆಯಬೇಕಿರುವುದು ‘ಫೇಸ್ಬುಕ್’ ಅಂತಾಗುತ್ತದೆ. ಈ ರೀತಿಯಾಗಿ ಅರ್ಧಾಕ್ಷರದ ಅಂತ್ಯವು ಮುಂದಿನ ವ್ಯಂಜನಾಕ್ಷರದೊಂದಿಗೆ ಕೂಡಿಕೊಳ್ಳದಂತೆ ಮಾಡುವುದಕ್ಕೆ ಹಲವರು ತ್ರಾಸ ಪಡುತ್ತಿದ್ದಾರೆ. ಅಕ್ಷರಗಳು ಕೂಡಿಕೊಳ್ಳದಂತೆ ಮಾಡಲು, ಯುನಿಕೋಡ್ ಅಕ್ಷರ ಶೈಲಿಯಲ್ಲಿ ‘ಝೀರೋ ವಿಡ್ತ್ ನಾನ್ ಜಾಯಿನರ್’ (ZWNJ) ಎಂಬ ಅಗೋಚರ ಅಕ್ಷರವೊಂದು ಸಹಕರಿಸುತ್ತದೆ. ಸ್ಕ್ರೀನ್ ಕೀಬೋರ್ಡಿನಲ್ಲಿ ಸ್ಪೇಸ್ ಅಕ್ಷರದ ಬಲಭಾಗದಲ್ಲೊಂದು ಕೀ ಇದೆ (ಚಿತ್ರ ನೋಡಿ). ಸ್+ZWNJ+ಬು ಬರೆದರೆ ಸ್‌ಬು ಅಂತ ಪ್ರತ್ಯೇಕವಾಗುತ್ತದೆ.
ಇವನ್ನೂ ನೋಡಿ
Samsung Galaxy M52: ಸ್ಲಿಮ್ ಮತ್ತು ಲೈಟ್ ಆದರೆ ಶಕ್ತಿಶಾಲಿ ಸ್ಮಾರ್ಟ್ಫೋನ್
120Hz AMOLED ಸ್ಕ್ರೀನ್, ವೇಗದ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್, 5G ಸಂಪರ್ಕ ವ್ಯವಸ್ಥೆ ಮತ್ತು ಬಿಕ್ಸ್ಬಿ ಎಂಬ ಜಾಣ ಸಹಾಯಕ ತಂತ್ರಾಂಶದೊಂದಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ52 ಸ್ಮಾರ್ಟ್ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮಧ್ಯಮ ದರ್ಜೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ, ತೀರಾ ಹಗುರವಾದ ಮತ್ತು ಅತ್ಯುತ್ತಮ ಬ್ಯಾಟರಿಯುಳ್ಳ ಹೊಚ್ಚ ಹೊಸ ಸ್ಮಾರ್ಟ್ ಸಾಧನವಿದು.



