ಫೇಸ್‌ಬುಕ್ ನಮ್ಮ ಪ್ರೈವೆಸಿಯನ್ನು ಬಯಲಾಗಿಸುತ್ತಿದೆ ಎಂಬ ಸುದ್ದಿಯೂ, ಅದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸುವುದಕ್ಕೂ ಮೊದಲು, ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿಯೇ ಸದ್ದು ಮಾಡುತ್ತಿತ್ತು. ಅದೆಂದರೆ, ನಿಮ್ಮ ಪ್ರೊಫೈಲ್ ಸುರಕ್ಷಿತವೇ ಎಂದು ತಿಳಿಯಲು BFF ಎಂಬ ಕೋಡ್ ಒಂದನ್ನು ಜುಕರ್‌ಬರ್ಗ್ ಸಂಶೋಧಿಸಿದ್ದಾರೆ, ಕಾಮೆಂಟ್‌ನಲ್ಲಿ ಇದನ್ನು ಟೈಪ್ ಮಾಡಿ, ಅದು ಹಸಿರು ಬಣ್ಣವಾಗಿ ಪರಿವರ್ತನೆಗೊಂಡರೆ ಸುರಕ್ಷಿತ ಎಂದರ್ಥ, ಇಲ್ಲವಾದರೆ, ಕೂಡಲೇ ಪಾಸ್‌ವರ್ಡ್ ಚೇಂಜ್ ಮಾಡಿಕೊಳ್ಳಿ, ಯಾರೋ ನಿಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದರ್ಥ ಅಂತ ಹೆದರಿಸುತ್ತಿದ್ದರು. ಈಗಾಗಲೇ Congrats, ಶುಭಾಶಯಗಳು ಅಂತ ಬರೆದರೆ ಆ ಪದದ ಬಣ್ಣ ಬದಲಾಗಿ, ಆನಿಮೇಶನ್‌ಗಳು ಕಾಣಿಸಿಕೊಳ್ಳುವುದನ್ನು ಕಂಡಿದ್ದೀರಿ. ಬಿಎಫ್ಎಫ್ ಎಂದರೂ ಇಂಥದ್ದೇ ಟೆಕ್ಸ್ಟ್ ಡಿಲೈಟ್ ಆನಿಮೇಶನ್ ಇರುವ ಪದ. ಬೆಸ್ಟ್ ಫ್ರೆಂಡ್ಸ್ ಫಾರೆವರ್ ಎಂಬುದರ ಸಂಕ್ಷಿಪ್ತ ರೂಪ.
ಇವನ್ನೂ ನೋಡಿ
ಆಂಡ್ರಾಯ್ಡ್ ಆವೃತ್ತಿ: ಐಸ್ಕ್ರೀಂ ಸ್ಯಾಂಡ್ವಿಚ್, ಕೇಕ್, ಜೆಲ್ಲಿಬೀನ್ ಬಳಿಕ ಕಾಜು ಕಟ್ಲಿ?
ಮಾಹಿತಿ @ ತಂತ್ರಜ್ಞಾನ – 7: ವಿಜಯ ಕರ್ನಾಟಕ ಅಂಕಣ 08-ಅಕ್ಟೋಬರ್-2012 ಪೈಪೋಟಿಯ ಈ ಯುಗದಲ್ಲಿ ಮೊಬೈಲ್, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ಗಳಿಗೆಲ್ಲ ಮೂಲಾಧಾರವಾಗಿರುವ ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣಾ ವ್ಯವಸ್ಥೆ) ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಬ್ಲ್ಯಾಕ್ಬೆರಿ, ವಿಂಡೋಸ್,...