ಗೆಲುವಿನ ಹಂಬಲ ಅಡಗಿತೇ?

0
434

ಏನಾಯ್ತು…. ಎಲ್ಲಿ ಎಡವಿದ್ರಿ?

     ಈಗಷ್ಟೇ ಮುಕ್ತಾಯವಾದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆಗಳು ಬರೆಯಲಾಗಿರುವುದು (ಚೊಚ್ಚಲ ಟೆಸ್ಟ್, 100ನೇ ಟೆಸ್ಟ್, ಭಾರತದ ಪರವಾದ ಅತ್ಯಧಿಕ ಟೆಸ್ಟ್… ಇತ್ಯಾದಿ) ಎಷ್ಟು ನಿಜವೋ, ದೇಶದ ಕ್ರೀಡಾಭಿಮಾನಿಗಳನ್ನು ನಿರಾಸೆಗೊಳಿಸಿದ್ದು ಕೂಡ ಅಷ್ಟೇ ನಿಜ.

    ಸರಣಿಯ ಮೊದಲ ಪಂದ್ಯ ಮತ್ತು ಕೊನೆಯ ಪಂದ್ಯದಲ್ಲಿ ಭಾರತೀಯ ದಾಂಡಿಗರ ಅಳುಕೋ ಅಥವಾ ತಂಡದ ಹುಳುಕೋ… ಒಟ್ಟಿನಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿ ಕೂತ ದ್ರಾವಿಡ್ ಪಡೆಯ ಮೇಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವಾಸ ಕಳೆದುಹೋಗಿದ್ದು ಸತ್ಯ.
ಬ್ಯಾಟು ಬೀಸಿದರೆ ಎದುರಾಳಿ ಬೌಲರ್‌ಗಳು ಹೆದರಿ ನಡುಗುತ್ತಿದ್ದ ವಿಶ್ವವಿಖ್ಯಾತ ದಾಂಡಿಗರಿದ್ದ ಭಾರತ ತಂಡ ಮೊದಲ ಪಂದ್ಯದ ಕೊನೆಯ ದಿನ ಗೆಲ್ಲುವ ಗುರಿಯನ್ನು ಬೆಂಬತ್ತಿ ಕೇಕೆ ಹಾಕುತ್ತದೆ ಎಂದು ಅಂದುಕೊಂಡವರೇ ಹೆಚ್ಚು. ಆದರೆ ಆಗಿದ್ದು ಭಾರತ ತಂಡದ ಗೆಲುವಿನ ಛಲವನ್ನೇ ಕಳೆದುಕೊಳ್ಳುವ ಹಳೆ ಚಾಳಿಗೆ ಮೊರೆ ಹೋಗಿದ್ದು. ಕೊನೆಯ ಪಂದ್ಯವೂ ಅಷ್ಟೇ. ಬೆಂಬತ್ತಲಾರದ ಅಥವಾ ಸೋಲುವ ಗುರಿಯೇನೂ ಭಾರತದ ಮುಂದಿರಲಿಲ್ಲ. ಇರದೇ ಇದ್ದುದು ಗೆಲುವಿನ ಹಸಿವು ಮಾತ್ರ.

    ಧೋನಿ, ದ್ರಾವಿಡ್, ಜಾಫರ್, ಯುವರಾಜ್ ಸಿಂಗ್…. ಮುಂತಾದ ವಿಶ್ವ ವಿಖ್ಯಾತರಿದ್ದರೂ ಇಂಥ ಸ್ಥಿತಿ. ಹಾಗಂತ, ಇದೇನೂ ಇಂಗ್ಲೆಂಡ್‌ನ ಅತ್ಯಂತ ಬಲಿಷ್ಠವಾಗಿರುವ ತಂಡವೇನಲ್ಲ. ಘಟಾನುಘಟಿಗಳೆಲ್ಲಾ ಬಂದ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ಹಿಂತಿರುಗಿದ್ದರು. ಈಗ ಇರುವುದೇನಿದ್ದರೂ ಹೊಸಬರೇ ಹೆಚ್ಚಿರುವ ತಂಡ.
ಭಾರತದ ಬ್ಯಾಟಿಂಗ್ ಬಲಕ್ಕೇನಾಗಿದೆ? ಧೋನಿ ಯಾಕೆ ಸ್ಫೋಟಿಸುತ್ತಿಲ್ಲ ? ವಿಕೆಟ್ ರಕ್ಷಿಸಿಕೊಳ್ಳುವುದನ್ನು ದಾಂಡಿಗರು ಮರೆತರೇಕೆ?
ಇನ್ನು ಏಕದಿನ ಪಂದ್ಯಗಳು ಎಂತೋ?

LEAVE A REPLY

Please enter your comment!
Please enter your name here