ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಲೇಖನಗಳ ಪುಟವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಯೂನಿಕೋಡ್ ಶಿಷ್ಟತೆಯ ಕನ್ನಡ ಅಕ್ಷರಗಳಲ್ಲಿ ವೈವಿಧ್ಯ ಇಲ್ಲದಿರುವುದು ಒಂದು ಮಟ್ಟಿನ ತೊಡಕು. ಯಾಕೆಂದರೆ, ನುಡಿ, ಬರಹ ಅಥವಾ ಶ್ರೀಲಿಪಿಗಳಲ್ಲಿದ್ದಷ್ಟು ಅಕ್ಷರ ವಿನ್ಯಾಸದ ವೈವಿಧ್ಯಗಳು ಯೂನಿಕೋಡ್‌ನಲ್ಲಿ ರೂಪುಗೊಂಡಿಲ್ಲ. ಆದರೂ, ಸದ್ಯಕ್ಕೆ ತುಂಗಾ ಹಾಗೂ ಏರಿಯಲ್ ಯೂನಿಕೋಡ್ ಎಂಎಸ್ ಎಂಬ ಫಾಂಟ್‌ಗಳ ಜತೆಗೆ ಕೇದಗೆ, ಮಲ್ಲಿಗೆ, ಸಂಪಿಗೆ, ಅಕ್ಷರ, ಜನ ಕನ್ನಡ, ರಘು ಕನ್ನಡ, ಸರಸ್ವತಿ ಮುಂತಾದವು ಅಂತರಜಾಲದಲ್ಲಿ ಉಚಿತವಾಗಿ ಲಭ್ಯ ಇವೆ. ಇವುಗಳ ಅಕ್ಷರ ಶೈಲಿಗಳು ಒಂದಕ್ಕಿಂತ ಒಂದು ಭಿನ್ನ. ಇವುಗಳನ್ನು ಬಳಸಿ ನೋಡಬಹುದು. ಯೂನಿಕೋಡ್‌ನಲ್ಲಿ ಕೆಲವೊಂದು ಅಕ್ಷರಗಳ ಕೂಡಿಕೆಯ ಬಗ್ಗೆ ಗೊಂದಲಗಳಿವೆಯಾದರೂ, ಈ ಕುರಿತು ಸಂಶೋಧನೆ, ಅಭಿವೃದ್ಧಿ ಕೆಲಸ ಇನ್ನೂ ಮುಂದುವರಿಯುತ್ತಿದೆ.
ಇವನ್ನೂ ನೋಡಿ
ಇದು ಅಮೃತ ಖಂಜಿರ: ಪಕ್ಕ ವಾದ್ಯಕ್ಕೆ ಪ್ರಧಾನ ಸ್ಥಾನ ಕಲ್ಪಿಸಿದ ಅಮೃತ್
ಮನ ಕೆರಳಿಸುವ ಆಧುನಿಕತೆಯ ಗದ್ದಲದ ಉಪದ್ವ್ಯಾಪಗಳ ನಡುವೆ, ಮನಶ್ಶಾಂತಿ ನೀಡಬಲ್ಲ, ಮನವರಳಿಸುವ ಕಲೆಯು ಮೊಬೈಲ್ ಫೋನ್ನ ಗೀಳು ಬಿಟ್ಟ ಮಕ್ಕಳಿಗಷ್ಟೇ ಒಲಿಯುವ ಕಾಲವಿದು. ಅಂತಹುದರಲ್ಲಿ ಪರಿಶ್ರಮದಿಂದ ಪಕ್ಕ ವಾದ್ಯ 'ಖಂಜಿರ' ಈಗ ಪ್ರಧಾನ ವಾದ್ಯವಾಗಿ ಸಂಗೀತ ಕಛೇರಿಗಳಲ್ಲಿ ಪ್ರಧಾನ ಸ್ಥಾನ ಅಲಂಕರಿಸುತ್ತಿದೆ. ಇದರ ಹಿಂದಿನ ಪರಿಶ್ರಮ, ಶ್ರದ್ಧೆ, ಛಲದ ದಾರಿಯನ್ನು ವಿವರಿಸಿದ್ದಾರೆ ಬೆಂಗಳೂರು ಬಸವನಗುಡಿಯ ಸಂಗೀತ ವಿದ್ವಾಂಸ ಅಮೃತ್ ಖಂಜಿರ.
ಈ ’ಸರಸ್ವತಿ’ ಫಾಂಟು ಎಲ್ಲಿ ಡೌನ್ಲೋಡಿಗೆ ಸಿಗ್ತದೆ ಹೇಳ್ತಿರಾ ಪ್ಲೀಸ್.
http://www.wazu.jp/gallery/Fonts_Kannada.html ಈ ತಾಣದಲ್ಲಿ ಹಲವು ಲಿಂಕುಗಳಿವೆ. ಈಗ ಅದು ಕಾಣಿಸುತ್ತಿಲ್ಲ.