ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಲೇಖನಗಳ ಪುಟವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಯೂನಿಕೋಡ್ ಶಿಷ್ಟತೆಯ ಕನ್ನಡ ಅಕ್ಷರಗಳಲ್ಲಿ ವೈವಿಧ್ಯ ಇಲ್ಲದಿರುವುದು ಒಂದು ಮಟ್ಟಿನ ತೊಡಕು. ಯಾಕೆಂದರೆ, ನುಡಿ, ಬರಹ ಅಥವಾ ಶ್ರೀಲಿಪಿಗಳಲ್ಲಿದ್ದಷ್ಟು ಅಕ್ಷರ ವಿನ್ಯಾಸದ ವೈವಿಧ್ಯಗಳು ಯೂನಿಕೋಡ್‌ನಲ್ಲಿ ರೂಪುಗೊಂಡಿಲ್ಲ. ಆದರೂ, ಸದ್ಯಕ್ಕೆ ತುಂಗಾ ಹಾಗೂ ಏರಿಯಲ್ ಯೂನಿಕೋಡ್ ಎಂಎಸ್ ಎಂಬ ಫಾಂಟ್‌ಗಳ ಜತೆಗೆ ಕೇದಗೆ, ಮಲ್ಲಿಗೆ, ಸಂಪಿಗೆ, ಅಕ್ಷರ, ಜನ ಕನ್ನಡ, ರಘು ಕನ್ನಡ, ಸರಸ್ವತಿ ಮುಂತಾದವು ಅಂತರಜಾಲದಲ್ಲಿ ಉಚಿತವಾಗಿ ಲಭ್ಯ ಇವೆ. ಇವುಗಳ ಅಕ್ಷರ ಶೈಲಿಗಳು ಒಂದಕ್ಕಿಂತ ಒಂದು ಭಿನ್ನ. ಇವುಗಳನ್ನು ಬಳಸಿ ನೋಡಬಹುದು. ಯೂನಿಕೋಡ್‌ನಲ್ಲಿ ಕೆಲವೊಂದು ಅಕ್ಷರಗಳ ಕೂಡಿಕೆಯ ಬಗ್ಗೆ ಗೊಂದಲಗಳಿವೆಯಾದರೂ, ಈ ಕುರಿತು ಸಂಶೋಧನೆ, ಅಭಿವೃದ್ಧಿ ಕೆಲಸ ಇನ್ನೂ ಮುಂದುವರಿಯುತ್ತಿದೆ.
ಇವನ್ನೂ ನೋಡಿ
ಕಂಪ್ಯೂಟರಿನಲ್ಲಿ ಪ್ರತಿನಿತ್ಯ ಉಪಯೋಗವಾಗುವ ಒಂದಿಷ್ಟು ಸರಳ ಟ್ರಿಕ್ಸ್
ಬಹುತೇಕ ಎಲ್ಲರೂ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುತ್ತಾರೆ. ದೈನಂದಿನ ಕೆಲಸ ಕಾರ್ಯದಲ್ಲಿ ಸರಳವಾದ ಕೆಲವೊಂದು ಟ್ರಿಕ್ಗಳ ಮೂಲಕ ಸಾಕಷ್ಟು ಸಮಯ ಉಳಿತಾಯ ಮಾಡಬಹುದು. ಅಂಥ ಕೆಲವು ಶಾರ್ಟ್ಕಟ್ ವಿಧಾನಗಳು ಇಲ್ಲಿವೆ. ನೀವೂ ಮಾಡಿ...
ಈ ’ಸರಸ್ವತಿ’ ಫಾಂಟು ಎಲ್ಲಿ ಡೌನ್ಲೋಡಿಗೆ ಸಿಗ್ತದೆ ಹೇಳ್ತಿರಾ ಪ್ಲೀಸ್.
http://www.wazu.jp/gallery/Fonts_Kannada.html ಈ ತಾಣದಲ್ಲಿ ಹಲವು ಲಿಂಕುಗಳಿವೆ. ಈಗ ಅದು ಕಾಣಿಸುತ್ತಿಲ್ಲ.