ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
View Comments
ಅವಿ, ನಿಮ್ಮ "ಲೋಹ ಹಕ್ಕಿ" ಪದ ನನ್ನ ಒಂದು ಕವನದಲ್ಲಿನ "ಹಾರಿ ಬಂದ ಯಂತ್ರ ಹಕ್ಕಿ" ಪ್ರಯೋಗವನ್ನು ನೆನಪಿಸಿತು. ಆ ಕವನ ಇಲ್ಲಿ ಈಗ ಅಪ್ರಸ್ತುತ, ಇನ್ನೊಮ್ಮೆ ಸಂದರ್ಭಾನುಸಾರ ನನ್ನ ಬ್ಲಾಗಲ್ಲಿ ಪೋಣಿಸುತ್ತೇನೆ.
ಅವೀ,
ಲೋಹಹಕ್ಕಿ ನಿಲ್ದಾಣವೆಂದ ಕೂಡಲೇ ಅಸುಪಾಸಿನ ಜೋಪಡಿಗಳು ಯಾಕೇ ನೆನಪಾಗುತ್ತೆ?
ಮುಂಬೈಯಲ್ಲಿ ವಿಮಾನ ಇಳಿಯುವಾಗ-ಎರುವಾಗ ಮೊದಲು ಕಣ್ಣಿಗೆ ಬೀಳುವುದು ಇವು..
ನಿಮ್ಮ ಕ್ಯಾಮೆರಾದಿಂದ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಜೋಪಡಿಗಳ ಪಕ್ಕದಲ್ಲೇ ಮಹಲುಗಳು - ಜೀವನದ ವೈಚಿತ್ರ್ಯವನ್ನು ಚೆನ್ನಾಗಿ ತೋರಿಸುತ್ತಿದೆ. ಒಂದೆಡೆ ಹಸಿವು, ಇನ್ನೊಂದೆಡೆ ಅಜೀರ್ಣದ ತೇಗು.
ಇದುವೇ ಜೀವ ಇದು ಜೀವನ
ಆದರೆ ಶೇಕಡಾ ಹತ್ತರಷ್ಟೂ ಜೋಪಡಿಗಳು ಕಾಣಿಸ್ತಿಲ್ಲ :D
ಜ್ಯೋತಿ ಅವರೆ,
ನಿಮ್ಮ ಹಾರಿ ಬಂದ ಯಂತ್ರ ಹಕ್ಕಿಯನ್ನು ಆದಷ್ಟು ಬೇಗ ಬ್ಲಾಗಲ್ಲಿ ಹಾಕಿದರೆ ಅದನ್ನು ಹೊಡೆದುರುಳಿಸಲು ಯೋಜನೆ ರೂಪಿಸ್ತೀನಿ. :)
ಶಿವ್ ಅವರೆ,
ಜೋಪಡಿಗಳ ನಡುವೆಯೂ ಮುಂಬಯಿ ತನ್ನ ಮಹಾನಗರ status ಅನ್ನು ಎಷ್ಟು ಜತನವಾಗಿ ಕಾಯ್ದುಕೊಂಡಿದೆ. ಬಹುಶಃ ಇದು ಹೊರ ಜಗತ್ತಿಗೆ ಕಾಣಿಸುವ ಮುಂಬಯಿ. ಒಳಗಿನ ಮುಂಬಯಿಯ ಸ್ಥಿತಿ ಒಳ ಹೊಕ್ಕವರಿಗೇ ಗೊತ್ತಾಗುತ್ತದೆ.
ಶ್ರೀನಿವಾಸರೆ,
ಒಂದು ರೀತಿಯಲ್ಲಿ ಎಲ್ಲರಿಗೂ ಹಸಿವೇ. ಕೆಲವರಿಗೆ ದುಡ್ಡಿನ ಹಸಿವು, ಕೆಲವರಿಗೆ ರಕ್ತ ಹೀರುವ ಹಸಿವು, ಕೆಲವರಿಗೆ ಮಾನವೀಯತೆಯ ಹಸಿವು, ಮತ್ತು ಕೆಲವರಿಗೆ ಹೇಳಲಾಗದ ಹಸಿವು.
ಇದುವೇ ಜೀವ, ಇದು ಜೀವನ.... ಹೌದು.
"ನಿಮ್ಮ ಹಾರಿ ಬಂದ ಯಂತ್ರ ಹಕ್ಕಿಯನ್ನು ಆದಷ್ಟು ಬೇಗ ಬ್ಲಾಗಲ್ಲಿ ಹಾಕಿದರೆ ಅದನ್ನು ಹೊಡೆದುರುಳಿಸಲು ಯೋಜನೆ ರೂಪಿಸ್ತೀನಿ.":- ಹಾಗಾ!! ಸರಿ, ಯಾವಾಗ ಹಾರಿಬಿಡಲಾಗುತ್ತೆ ಅನ್ನುವುದನ್ನು ಬಹಿರಂಗಪಡಿಸಲಾಗುವುದಿಲ್ಲ. ಗುಟ್ಟು ರಟ್ಟು ಮಾಡಲು ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಆ ಭಯವಿಲ್ಲ. ಹವಾಮಾನ ಅನುಕೂಲ ನೋಡಿಕೊಂಡು "ಯಂತ್ರ ಹಕ್ಕಿ"ಯನ್ನು ಹಾರಿಬಿಡಲಾಗುವುದು.... ನಿರೀಕ್ಷಿಸಿ.
ಎಲ್ಲ ಮಹಾನಗರಗಳ ಕಥೆಯೂ ಅದೇ ತಾನೇ? "ಮಹಾ ನಗರ" ಅನ್ನಿಸಿಕೊಳ್ಳಬೇಕಾದರೆ ಎಲ್ಲವನ್ನೂ ಅದು ತನ್ನೊಳಗಿರಿಸಿಕೊಂಡು, ಅರಗಿಸಿಕೊಂಡು, ಬೆಳೆಸಿಕೊಳ್ಳುತ್ತಿರಬೇಕು; ಆಮೂಲಕ ತಾನೂ ಬೆಳೆಯುತ್ತಿರಬೇಕು. ವಿವಿಧ ಹಸಿವೆಗಳೇ ಅದರ ಇಂಧನ, ಶಕ್ತಿ. ಮುಂಬಯಿ, ದೆಹಲಿ, ಕೋಲ್ಕತಾ, ಚೆನ್ನೈಗಳಾಗಲೀ ಈಗ ಬೆಳೆಯುತ್ತಿರುವ ಬೆಂಗಳೂರಾಗಲೀ ಇದಕ್ಕೆ ಹೊರತಲ್ಲ.
ಸುಪ್ತ ದೀಪ್ತಿ / ಜ್ಯೋತಿ ಅವರೆ,
ನಾನಿಲ್ಲದಿದ್ದಾಗ ನಿಮ್ಮ ಹಕ್ಕಿ ಹಾರಿ ಬಿಟ್ರಾ...? ನೋಡ್ತೀನಿ...
ಮಹಾ ನಗರವೂ ಮಹಾ ನರಕವೂ ಬಹುಶಃ ಒಂದೇ ಆಗುತ್ತಿದೆ ಈ ದಿನಗಳಲ್ಲಿ. ಅಲ್ಲವೇ?
ಸರಿಯೆ ; ನಿಮ್ಮ ಲೋಹದ ಹಕ್ಕಿ ಹಾರಿಕೆಳಗೆ ಕಂಡ ನೋಟ ನಿಜಕ್ಕೂ ಚೆನ್ನಾಗಿಯೆ ಇದೆ.
ಏನೋ ನಮ್ಮ ಕಣ್ಣುಗಳಿಗೆ ಕಾಣುವ ದ್ರುಷ್ಯಗಳೇ ಸ್ವಲ್ಪ ಗೊಂದಲತರುವಂತಹದು.