ಡಿಜಿಟಲ್ ವ್ಯಸನವೇ?: ಸ್ಕ್ರೀನ್ ಟೈಮ್ ನಿಗದಿಪಡಿಸಲು ಇದೋ ಇಲ್ಲಿದೆ ಮಾಹಿತಿ

0
411

My Article in Prajavani Olanota on 17 Nov 2019

Screen Time

ಸ್ಕ್ರೀನ್ ಟೈಮ್ (ಡಿಜಿಟಲ್ ಸಾಧನದ ಸ್ಕ್ರೀನ್ ನೋಡುವ ಸಮಯ) ನಿಯಂತ್ರಿಸುವ ಬಗ್ಗೆ ಇತ್ತೀಚೆಗೆ ಗಂಭೀರವಾಗಿಯೇ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆ್ಯಪಲ್ ಕಂಪ ನಿಯು ತನ್ನ ಐಒಎಸ್ ಬಳಸುವ ಸಾಧನಗಳಲ್ಲಿ (ಐಫೋನ್, ಐಪ್ಯಾಡ್) ‘ಸ್ಕ್ರೀನ್ ಟೈಮ್’ ಹೆಸರಿನ ಆ್ಯಪ್ ಅಳವಡಿಸಿದೆ. ಸೆಟ್ಟಿಂಗ್ಸ್‌ನಲ್ಲಿ ಇದನ್ನು ನಾವು ಕಾಣಬಹುದು. ನಿರ್ದಿಷ್ಟ ಆ್ಯಪ್ ಅನ್ನು ಎಷ್ಟು ಸಮಯ ಬಳಸಬೇಕು ಎಂದು ಈ ಆ್ಯಪ್ ಮೂಲಕ ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಈ ಸೆಟ್ಟಿಂಗ್ಸ್ ಮೂಲಕ ನಿಗದಿತ ಸಮಯಾವಧಿಗೆ

ನಿರ್ದಿಷ್ಟ ಆ್ಯಪ್ ಅನ್ನು ಕಾರ್ಯನಿರ್ವಹಿಸದಂತೆ ತಡೆಯುವ, ಆ್ಯಪ್‌ಗಳ ಲಭ್ಯತೆಯನ್ನೇ ಸೀಮಿತಗೊಳಿಸುವ, ಜತೆಗೆ ಕೆಲವು ಆ್ಯಪ್‌ಗಳು ಸದಾ ಕಾರ್ಯನಿರ್ವಹಿಸುವಂತೆ ಇರಿಸಿಕೊಳ್ಳುವ ಅಷ್ಟೇ ಅಲ್ಲದೆ, ನಮ್ಮ ಸಾಧನದಲ್ಲಿ ಅನಗತ್ಯ ವಿಷಯಗಳು, ಮಾಹಿತಿಗಳು ಪ್ರದರ್ಶನವಾಗದಂತೆ ತಡೆಯುವ ಹೊಂದಾಣಿಕೆ ಮಾಡಿಕೊಳ್ಳಬಹುದು.

ಆ್ಯಪಲ್ ಸಾಧನಗಳಲ್ಲಿ ಸ್ಕ್ರೀನ್ ನೋಡುವ ಸಮಯವನ್ನು ನಿರ್ಬಂಧಿಸುವ ಈ ಸೆಟ್ಟಿಂಗ್ ಅಂತರ್‌ನಿರ್ಮಿತವಾಗಿ ಬಂದಿದ್ದರೆ, ಇತ್ತೀಚಿನ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲೂ ಫೋನ್ ತಯಾರಿಕಾ ಕಂಪನಿಗಳು ಇಂಥ ಸೆಟ್ಟಿಂಗ್‌ಗಳನ್ನು ಅಳವಡಿಸುತ್ತಿವೆ. ಇದಲ್ಲದೆ, ಆ್ಯಪಲ್ ಅಥವಾ ಆಂಡ್ರಾಯ್ಡ್ ಸಾಧನಗಳಿಗಾಗಿ ಸಾಕಷ್ಟು ಅಪ್ಲಿಕೇಶನ್‌ಗಳು ಅಥವಾ ಆ್ಯಪ್‌ಗಳು ಪೇರೆಂಟಲ್ ಕಂಟ್ರೋಲ್ ಹೆಸರಲ್ಲಿ ಲಭ್ಯ ಇವೆ. ಅವುಗಳಲ್ಲಿ ಪ್ರಮುಖವಾದವು ಎಂದರೆ, OurPact, Net Nanny, Screen Time, App

Detox ಮುಂತಾದವು. ಇಷ್ಟಲ್ಲದೆ, ಸ್ವತಃ ಗೂಗಲ್ ಇತ್ತೀಚೆಗೆ ಈ ಸ್ಕ್ರೀನ್ ಟೈಮ್ ನಿಯಂತ್ರಣಕ್ಕಾಗಿ ತನ್ನದೇ ಆ್ಯಪ್‌ಗಳ ಗುಚ್ಛವನ್ನು ಪ್ಲೇಸ್ಟೋರ್‌ನಲ್ಲಿ ಹೊರತಂದಿದೆ. ಅವುಗಳೆಂದರೆ, ದಿನಕ್ಕೆಷ್ಟು ಬಾರಿ ಫೋನ್ ಸ್ಕ್ರೀನ್ ಅನ್‌ಲಾಕ್ ಮಾಡಿದ್ದೀರೆಂದು ಎಚ್ಚರಿಸುವ Unlock Clock, ನೋಟಿಫಿಕೇಶನ್‌ಗಳನ್ನು ನಿರ್ದಿಷ್ಟ ಸಮಯದವರೆಗೆ ತಡೆಹಿಡಿಯುವ Post Box, ಮನೆಯವರೆಲ್ಲಾ ಏಕಕಾಲಕ್ಕೆ ತಂತ್ರಜ್ಞಾನದಿಂದ ಮುಕ್ತರಾಗಿ, ಒಟ್ಟು ಸೇರಲು ಪ್ರೇರೇಪಿಸುವ We Flip, ಫೋನ್ ಬಳಸದೇ ಇಡೀ ದಿನ ಪ್ರಮುಖ ಕಾರ್ಯಗಳನ್ನು ಮಾಡಲು ನೆರವಾಗಬಲ್ಲ Paper Phone, ಅತ್ಯಗತ್ಯ ಆ್ಯಪ್‌ಗಳನ್ನು ಮಾತ್ರವೇ ಬಳಸುವಂತೆ ಮಾಡಬಲ್ಲ Desert Island ಹಾಗೂ ದಿನದ ನಿರ್ದಿಷ್ಟ ಸಮಯಕ್ಕೆ ನಿರ್ದಿಷ್ಟ ಆ್ಯಪ್‌ಗಳನ್ನು ಮಾತ್ರ ಬಳಸುವಂತೆ ನೆರವಾಗುವ Morph ಹೆಸರಿನ ಆ್ಯಪ್.

ಇವೆಲ್ಲವೂ ಡಿಜಿಟಲ್ ವೆಲ್‌ಬೀಯಿಂಗ್ ಎಂಬ ಗೂಗಲ್ ಆ್ಯಪ್‌ಗಳ ಗುಚ್ಛದ ಭಾಗ. ಅತ್ಯಾಧುನಿಕ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿ ಇವು ಅಳವಡಿಕೆಯಾಗಿಯೇ ಬರುತ್ತಿವೆ.

-ಅವಿನಾಶ್ ಬಿ.

LEAVE A REPLY

Please enter your comment!
Please enter your name here