ಟೆಕ್ ಟಾನಿಕ್: ಮೊಬೈಲ್ ಕರೆ ಎಲ್ಲಿಂದ ಬಂತು ಅಂತ ತಿಳಿಯಲು

0
239

ನಿಮ್ಮ ಫೋನ್‌ಗೆ ಯಾರಿಂದಲೋ ಕರೆ ಬರುತ್ತದೆ. ಅವರ ಹೆಸರು ನಿಮ್ಮ ಫೋನ್‌ನ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಇರುವುದಿಲ್ಲ. ಕೆಲವೊಂದು ಬಾರಿ ಟ್ರೂಕಾಲರ್‌ನಲ್ಲಿಯೂ ಆ ನಂಬರ್ ದಾಖಲಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ, ಈ ಕರೆಯು ಯಾವ ಸ್ಥಳದಿಂದ ಬಂತು, ಈ ನಂಬರ್ ಯಾವ ಸರ್ವಿಸ್ ಪ್ರೊವೈಡರ್‌ಗೆ ಸೇರಿದ್ದು ಅಂತ ತಿಳಿದುಕೊಳ್ಳಬೇಕಾಗಿದೆಯೇ?

ಇದಕ್ಕಾಗಿಯೇ ಒಂದು ವೆಬ್ ಸೈಟ್ ಇದೆ. mobilenumbertracker.com ತಾಣಕ್ಕೆ ಹೋಗಿ, ನಿಮಗೆ ಬೇಕಾದ ನಂಬರ್ ಹಾಕಿ ಎಂಟರ್ ಕೊಟ್ಟರಾಯಿತು. ಈ ಮೊಬೈಲ್ ಯಾವ ಸ್ಥಳದಲ್ಲಿದೆ ಎಂಬುದನ್ನು ಮ್ಯಾಪ್ ಮೂಲಕ ತೋರಿಸುತ್ತದೆ. ಆದರೆ, ನೀವು ನಂಬರ್ ಪೋರ್ಟೆಬಿಲಿಟಿ ಮೂಲಕ ಮೊಬೈಲ್ ನಂಬರನ್ನು ಬೇರೆ ಸರ್ವಿಸ್ ಪ್ರೊವೈಡರ್‌ಗೆ ಬದಲಾಯಿಸಿದ್ದರೆ (ಪೋರ್ಟಿಂಗ್ ಮಾಡಿಸಿದ್ದರೆ), ಈಗಿನ ಸರ್ವಿಸ್ ಪ್ರೊವೈಡರ್ ಯಾರೆಂದು ತಿಳಿಯುವುದು ಕಷ್ಟ.

LEAVE A REPLY

Please enter your comment!
Please enter your name here