ಜಿಮೇಲ್ ಬಳಸುವವರಿಗೆ ಈ ವಿಷಯ ಗೊತ್ತಿರಲಿ. ಯಾವುದೋ ಒಂದು ಮೇಲ್ ಕಳುಹಿಸಿರುತ್ತೀರಿ. ಕಳುಹಿಸಿದ ತಕ್ಷಣ, ಅದು ಅವರಿಗೆ ಕಳುಹಿಸಬಾರದಾಗಿತ್ತು ಎಂದೋ, ಅದರಲ್ಲಿ ಅಕ್ಷರ ತಪ್ಪು ಸರಿಪಡಿಸಬೇಕು ಎಂದೋ, ವಾಕ್ಯ ಸೇರಿಸಬೇಕು ಅಂತಲೋ ಅಥವಾ ಬರೆದುದು ತಪ್ಪಾಯಿತು ಅಂತಲೋ ಅರಿವಿಗೆ ಬಂದರೆ, ಕಳುಹಿಸಿದ ಸಂದೇಶವನ್ನು, ಅವರಿಗೆ ತಲುಪುವ ಮುನ್ನವೇ ವಾಪಸ್ ಕರೆಸಿಕೊಳ್ಳುವ ಆಯ್ಕೆಯೊಂದಿದೆ. ಅದುವೇ ಅನ್‌ಡು (Undo). ಮೇಲ್ ಕಳುಹಿಸಿದಾಕ್ಷಣ, ಮೇಲ್ಭಾಗದಲ್ಲಿ Undo ಅಂತ ಬಟನ್ ಕಾಣಿಸುತ್ತದೆ. 30 ಸೆಕೆಂಡುವರೆಗೆ ಇದು ಕಾಣಿಸುವಂತೆ ಮಾಡಬಹುದು. ಇದಕ್ಕಾಗಿ, ಜಿಮೇಲ್ ಸೆಟ್ಟಿಂಗ್ಸ್‌ನಲ್ಲಿ (ಗಿಯರ್ ಐಕಾನ್) ‘ಜನರಲ್’ ವಿಭಾಗದಲ್ಲಿ, Undo Send ಅಂತ ಇರುವಲ್ಲಿ 30 ಸೆಕೆಂಡು ಆಯ್ಕೆ ಮಾಡಿಕೊಂಡು, ನಂತರ ಕೆಳಗೆ ‘ಸೇವ್ ಚೇಂಜಸ್’ ಕ್ಲಿಕ್ ಮಾಡಿದರಾಯಿತು.
ಇವನ್ನೂ ನೋಡಿ
ಕ್ರೋಮ್ ಬ್ರೌಸರ್ ಬಳಸುತ್ತಿದ್ದೀರಾ? ಪ್ಲಗ್-ಇನ್ ಬಗ್ಗೆ ಎಚ್ಚರ!
ಗೂಗಲ್ ಕ್ರೋಮ್ ಬ್ರೌಸರ್ನ ಎಕ್ಸ್ಟೆನ್ಷನ್ಗಳು ಅಥವಾ ಪ್ಲಗ್-ಇನ್ಗಳಿಂದ ಸ್ಪೈವೇರ್ನಂತಹಾ ಮಾಲ್ವೇರ್ಗಳು (ಕುತಂತ್ರಾಂಶಗಳು) ಬಳಕೆದಾರರ ಮಾಹಿತಿಗೆ ಕನ್ನ ಹಾಕಿವೆ ಎಂಬ ವಿಚಾರ ಕಳೆದ ವಾರ ಆತಂಕ ಮೂಡಿಸಿತು. ಇಂತಹಾ ಪ್ಲಗ್-ಇನ್ಗಳೆಂಬ...