ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ ಆಗುತ್ತಾ ನಿಮ್ಮ ಇಂಟರ್ನೆಟ್ ಪ್ಯಾಕನ್ನೂ ಕಬಳಿಸಿಬಿಡುತ್ತವೆ. ಈ ವೀಡಿಯೋಗಳ ಹಾವಳಿ ತಪ್ಪಿಸಲು ಮತ್ತು ಡೇಟಾ ಪ್ಯಾಕ್ ಉಳಿಸಲು ಹೀಗೆ ಮಾಡಿ. FB ಆ್ಯಪ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ, ‘ಅಕೌಂಟ್ ಸೆಟ್ಟಿಂಗ್ಸ್’ ಅಂತ ಕ್ಲಿಕ್ ಮಾಡಿ. ‘ವೀಡಿಯೋಸ್ ಆ್ಯಂಡ್ ಫೋಟೋಸ್’ ಕ್ಲಿಕ್ ಮಾಡಿ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ Never Auto-Play Videos ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಆಗ ನಿಮಗೆ ವೀಡಿಯೋಗಳೇ ಕಾಣಿಸುವ ಬದಲು ನಿಮಗೆ ಬೇಕಾದ ಅಪ್‌ಡೇಟ್‌ಗಳೂ ಸುಲಭವಾಗಿ ಕಾಣಿಸುತ್ತವೆ.
ಇವನ್ನೂ ನೋಡಿ
ನಿಮ್ಮ ಫೋಟೋಗಳನ್ನು ತಿದ್ದಲು ಸರಳ, ಉಚಿತ ತಂತ್ರಾಂಶಗಳು
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-16 (ಡಿಸೆಂಬರ್ 10, 2012)
ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಡಿಜಿಟಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದೀರಿ. ಒಂದೊಂದು ಫೋಟೋ ಕೂಡ 1 ಎಂಬಿ ಅಥವಾ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಇದನ್ನೇ ನಿಮ್ಮ...



