ಜಿಮೇಲ್ ಬಳಸುವವರಿಗೆ ಈ ವಿಷಯ ಗೊತ್ತಿರಲಿ. ಯಾವುದೋ ಒಂದು ಮೇಲ್ ಕಳುಹಿಸಿರುತ್ತೀರಿ. ಕಳುಹಿಸಿದ ತಕ್ಷಣ, ಅದು ಅವರಿಗೆ ಕಳುಹಿಸಬಾರದಾಗಿತ್ತು ಎಂದೋ, ಅದರಲ್ಲಿ ಅಕ್ಷರ ತಪ್ಪು ಸರಿಪಡಿಸಬೇಕು ಎಂದೋ, ವಾಕ್ಯ ಸೇರಿಸಬೇಕು ಅಂತಲೋ ಅಥವಾ ಬರೆದುದು ತಪ್ಪಾಯಿತು ಅಂತಲೋ ಅರಿವಿಗೆ ಬಂದರೆ, ಕಳುಹಿಸಿದ ಸಂದೇಶವನ್ನು, ಅವರಿಗೆ ತಲುಪುವ ಮುನ್ನವೇ ವಾಪಸ್ ಕರೆಸಿಕೊಳ್ಳುವ ಆಯ್ಕೆಯೊಂದಿದೆ. ಅದುವೇ ಅನ್‌ಡು (Undo). ಮೇಲ್ ಕಳುಹಿಸಿದಾಕ್ಷಣ, ಮೇಲ್ಭಾಗದಲ್ಲಿ Undo ಅಂತ ಬಟನ್ ಕಾಣಿಸುತ್ತದೆ. 30 ಸೆಕೆಂಡುವರೆಗೆ ಇದು ಕಾಣಿಸುವಂತೆ ಮಾಡಬಹುದು. ಇದಕ್ಕಾಗಿ, ಜಿಮೇಲ್ ಸೆಟ್ಟಿಂಗ್ಸ್‌ನಲ್ಲಿ (ಗಿಯರ್ ಐಕಾನ್) ‘ಜನರಲ್’ ವಿಭಾಗದಲ್ಲಿ, Undo Send ಅಂತ ಇರುವಲ್ಲಿ 30 ಸೆಕೆಂಡು ಆಯ್ಕೆ ಮಾಡಿಕೊಂಡು, ನಂತರ ಕೆಳಗೆ ‘ಸೇವ್ ಚೇಂಜಸ್’ ಕ್ಲಿಕ್ ಮಾಡಿದರಾಯಿತು.
ಇವನ್ನೂ ನೋಡಿ
Artificial Intelligence, Machine Learning – ಯಂತ್ರಗಳಿಗೆ ‘ಯೋಚನಾ’ ಶಕ್ತಿ
Artificial Intelligence (AI) Machine Learning (ML): ಇತ್ತೀಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ಪದವನ್ನು ನಾವು ತುಸು ಹೆಚ್ಚಾಗಿಯೇ ಕೇಳಲಾರಂಭಿಸಿದ್ದೇವೆ. ನಮ್ಮ ಅನುಗಾಲದ ಒಡನಾಡಿಯೇ ಆಗಿಬಿಟ್ಟಿರುವ ಸ್ಮಾರ್ಟ್ ಫೋನ್ಗಳಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನವು ಅಡಕವಾಗಿದೆ ಮತ್ತು ನಾವದನ್ನು ದಿನನಿತ್ಯ ಬಳಸುತ್ತಿದ್ದೇವೆ ಎಂದರೆ ಕೆಲವರಿಗಾದರೂ ಅಚ್ಚರಿಯಾದೀತು.