ನೀವು ಗೂಗಲ್ ಎಂಬ ಸರ್ಚ್ ಎಂಜಿನ್ ಬಳಸಿ ಏನಾದರೂ ಹುಡುಕುತ್ತೀರಿ. ಅದು ಇಡೀ ಇಂಟರ್ನೆಟ್ಟನ್ನು ಜಾಲಾಡಿ, ನೀವು ಹುಡುಕಿದ ಪದದ ಕುರಿತು ಮಾಹಿತಿ ಇರುವ ಎಲ್ಲ ಜಾಲತಾಣಗಳನ್ನು ತೋರಿಸುತ್ತದೆ. ನಿಮಗೆ ಗೊಂದಲ ಹೆಚ್ಚಾಗಬಹುದು. ಆದರೆ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವೆಬ್ ತಾಣದಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಕೂಡ ಗೂಗಲ್ ಮೂಲಕವೇ ಹುಡುಕಬಹುದು. ಹೇಗೆ ಗೊತ್ತೇ? ಸರ್ಚ್ ಮಾಡುವಾಗ, ನಿರ್ದಿಷ್ಟ ಪದದ ಬಳಿಕ ಸ್ಪೇಸ್ ಕೊಟ್ಟು, site: ಅಂತ ಬರೆದು, ಸ್ಪೇಸ್ ಇಲ್ಲದೆ ವೆಬ್‌ಸೈಟಿನ ಯುಆರ್‌ಎಲ್ ಹಾಕಬೇಕು. ಉದಾಹರಣೆಗೆ: ತಂತ್ರಜ್ಞಾನ site:Vijaykarnataka.com ಅಂತ ಬರೆದು ಸರ್ಚ್ ಮಾಡಿದರಾಯಿತು. ವಿಜಯ ಕರ್ನಾಟಕ ತಾಣದಲ್ಲಿ ತಂತ್ರಜ್ಞಾನ ವಿಷಯದಲ್ಲಿ ಬಂದಿರುವ ಎಲ್ಲ ಲೇಖನಗಳ ಲಿಂಕ್ ಕಾಣಿಸುತ್ತದೆ.
ಇವನ್ನೂ ನೋಡಿ
Infinix HOT S3X Review: ಅಗ್ಗದ ದರದ ಕ್ಯಾಮೆರಾ ಕೇಂದ್ರಿತ ಫೋನ್
ಈಗಾಗಲೇ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಹೊಸ ಛಾಪು ಬೀರುತ್ತಿರುವ ಟ್ರಾನ್ಸಿಯಾನ್ ಹೋಲ್ಡಿಂಗ್ಸ್ನ ಇನ್ಫಿನಿಕ್ಸ್ ಇಂಡಿಯಾ ಹೊರತಂದಿರುವ ಮತ್ತೊಂದು ಸ್ಮಾರ್ಟ್ ಫೋನ್ Infinix HOT S3X. ಅಗ್ಗದ ದರದಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳುಳ್ಳ ಫೋನ್ ಇದು....