ನೀವು ಗೂಗಲ್ ಎಂಬ ಸರ್ಚ್ ಎಂಜಿನ್ ಬಳಸಿ ಏನಾದರೂ ಹುಡುಕುತ್ತೀರಿ. ಅದು ಇಡೀ ಇಂಟರ್ನೆಟ್ಟನ್ನು ಜಾಲಾಡಿ, ನೀವು ಹುಡುಕಿದ ಪದದ ಕುರಿತು ಮಾಹಿತಿ ಇರುವ ಎಲ್ಲ ಜಾಲತಾಣಗಳನ್ನು ತೋರಿಸುತ್ತದೆ. ನಿಮಗೆ ಗೊಂದಲ ಹೆಚ್ಚಾಗಬಹುದು. ಆದರೆ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವೆಬ್ ತಾಣದಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಕೂಡ ಗೂಗಲ್ ಮೂಲಕವೇ ಹುಡುಕಬಹುದು. ಹೇಗೆ ಗೊತ್ತೇ? ಸರ್ಚ್ ಮಾಡುವಾಗ, ನಿರ್ದಿಷ್ಟ ಪದದ ಬಳಿಕ ಸ್ಪೇಸ್ ಕೊಟ್ಟು, site: ಅಂತ ಬರೆದು, ಸ್ಪೇಸ್ ಇಲ್ಲದೆ ವೆಬ್‌ಸೈಟಿನ ಯುಆರ್‌ಎಲ್ ಹಾಕಬೇಕು. ಉದಾಹರಣೆಗೆ: ತಂತ್ರಜ್ಞಾನ site:Vijaykarnataka.com ಅಂತ ಬರೆದು ಸರ್ಚ್ ಮಾಡಿದರಾಯಿತು. ವಿಜಯ ಕರ್ನಾಟಕ ತಾಣದಲ್ಲಿ ತಂತ್ರಜ್ಞಾನ ವಿಷಯದಲ್ಲಿ ಬಂದಿರುವ ಎಲ್ಲ ಲೇಖನಗಳ ಲಿಂಕ್ ಕಾಣಿಸುತ್ತದೆ.
ಇವನ್ನೂ ನೋಡಿ
Samsung Galaxy M33 5G Review: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್
Samsung Galaxy M33 5G. ಹಿಂದಿನ ಎಂ32ರ ಉತ್ತಮ ಅಪ್ಗ್ರೇಡ್ ಇದು. ವಿಶೇಷವಾಗಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಧುನಿಕ ಫೋನ್ಗಳಾದ ಎ53 5ಜಿಯಲ್ಲಿ ಬಳಕೆಯಾಗಿರುವ ಹೊಸ ಎಕ್ಸಿನೋಸ್ ಚಿಪ್ ಇಲ್ಲೂ ಬಳಕೆಯಾಗಿದ್ದು, 120Hz ರಿಫ್ರೆಶ್ ರೇಟ್, 6000mAh ಬ್ಯಾಟರಿ ಇದರಲ್ಲಿಯೂ ಇದೆ.






