ನೀವು ಗೂಗಲ್ ಎಂಬ ಸರ್ಚ್ ಎಂಜಿನ್ ಬಳಸಿ ಏನಾದರೂ ಹುಡುಕುತ್ತೀರಿ. ಅದು ಇಡೀ ಇಂಟರ್ನೆಟ್ಟನ್ನು ಜಾಲಾಡಿ, ನೀವು ಹುಡುಕಿದ ಪದದ ಕುರಿತು ಮಾಹಿತಿ ಇರುವ ಎಲ್ಲ ಜಾಲತಾಣಗಳನ್ನು ತೋರಿಸುತ್ತದೆ. ನಿಮಗೆ ಗೊಂದಲ ಹೆಚ್ಚಾಗಬಹುದು. ಆದರೆ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವೆಬ್ ತಾಣದಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಕೂಡ ಗೂಗಲ್ ಮೂಲಕವೇ ಹುಡುಕಬಹುದು. ಹೇಗೆ ಗೊತ್ತೇ? ಸರ್ಚ್ ಮಾಡುವಾಗ, ನಿರ್ದಿಷ್ಟ ಪದದ ಬಳಿಕ ಸ್ಪೇಸ್ ಕೊಟ್ಟು, site: ಅಂತ ಬರೆದು, ಸ್ಪೇಸ್ ಇಲ್ಲದೆ ವೆಬ್‌ಸೈಟಿನ ಯುಆರ್‌ಎಲ್ ಹಾಕಬೇಕು. ಉದಾಹರಣೆಗೆ: ತಂತ್ರಜ್ಞಾನ site:Vijaykarnataka.com ಅಂತ ಬರೆದು ಸರ್ಚ್ ಮಾಡಿದರಾಯಿತು. ವಿಜಯ ಕರ್ನಾಟಕ ತಾಣದಲ್ಲಿ ತಂತ್ರಜ್ಞಾನ ವಿಷಯದಲ್ಲಿ ಬಂದಿರುವ ಎಲ್ಲ ಲೇಖನಗಳ ಲಿಂಕ್ ಕಾಣಿಸುತ್ತದೆ.
ಇವನ್ನೂ ನೋಡಿ
ಯಕ್ಷಗಾನದಲ್ಲಿ ಬೆಳೆಯುವ ಸಿರಿ: ಯಕ್ಷ ಪಂಚಮಿ
ಆಧುನಿಕ ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿಯತ್ತ ಒಲಿಸಿ ಕರೆತರುವುದು ಪೋಷಕರ ಅತಿದೊಡ್ಡ ಸವಾಲಿನ ವಿಷಯವೇ. ಎಳಸು ಮನದ ಅವರ ಅದ್ಭುತ ಪ್ರತಿಭೆಯನ್ನು ಸೂಕ್ತ ದಿಕ್ಕಿಗೆ ತಿರುಗಿಸಿದರೆ...