ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು ಇದು ಕೆಲವೊಮ್ಮೆ ಮಾತ್ರ ಯಾಕಾಗಿ ಕಾಣಿಸಿಕೊಳ್ಳುತ್ತದೆ? ವೀಡಿಯೋ ಅಥವಾ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಮಾತ್ರವೇ ಈ ಐಕಾನ್ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು (ಒಂದೊಂದರಲ್ಲಿ ಒಂದೊಂದು ವೆಬ್ ಪುಟ) ಕೆಲಸ ಮಾಡುತ್ತಾರೆ. ದಿಢೀರನೇ ಸದ್ದು ಕೇಳಿಸಿದಾಗ ಯಾವುದರಲ್ಲಿ ವೀಡಿಯೊ ಅಥವಾ ಆಡಿಯೊ ಪ್ಲೇ ಆಗುತ್ತದೆ ಎಂಬುದು ತಿಳಿಯುವುದಿಲ್ಲ. ಯಾವ ಟ್ಯಾಬ್‌ನಲ್ಲಿ ಸದ್ದು ಕೇಳಿಬರುತ್ತಿದೆ ಎಂಬುದನ್ನು ತಿಳಿಯುವುದಕ್ಕಾಗಿಯೇ ಈ ಐಕಾನ್ ಇದೆ.
ಇವನ್ನೂ ನೋಡಿ
ಹೆಲನ್ ಆಡಂಸ್ ಕೆಲ್ಲರ್
1 9 ತಿಂಗಳಿನ ಪುಟ್ಟ ಬಾಲಕಿಯಾಗಿರುವಾಗಲೇ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ ತನ್ನ ವಾಕ್, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಜೀವನದಲ್ಲಿ ಮಹಾನ್ ಎತ್ತರಕ್ಕೆ ಏರಿ, "ಸಾಧಿಸಿದರೆ ಸಬಲ ನುಂಗಬಹುದು" ಎಂಬುದನ್ನು ತೋರಿಸಿಕೊಟ್ಟವಳು. ಅಮೆರಿಕದ...
