ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದ ಜನಪ್ರಿಯತೆ ಹೆಚ್ಚಿದೆ. ಈಗ ಆನ್‌ಲೈನ್ ಸಾಮಾಜಿಕ ಚಟುವಟಿಕೆಯಲ್ಲಿ ಅದರ ಪಾಲೂ ಬೆಳೆಯತ್ತಿದೆ. ಕ್ಷಿಪ್ರವಾಗಿ ಸುದ್ದಿ ತಿಳಿಯಲು, ತತ್‌ಕ್ಷಣದ ವೀಡಿಯೋ, ಫೋಟೋ ನೋಡಲು ಜತೆಗೆ ಅಧಿಕಾರಿಗಳ, ಸರಕಾರದ ಪ್ರತಿನಿಧಿಗಳ ಕ್ಷಿಪ್ರ ಸಂಪರ್ಕಕ್ಕೂ ಅದುವೇ ಬಳಕೆಯಾಗುತ್ತಿದೆ. ಅದರಲ್ಲಿ ಬರುವ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? http://twittervideodownloader.com/download ಎಂಬ ತಾಣ ಇದಕ್ಕಾಗಿ ಸಹಕರಿಸುತ್ತದೆ. ನಿಮಗೆ ಬೇಕಾದ ಟ್ವೀಟ್ ಸಂದೇಶದ ನಿರ್ದಿಷ್ಟ ಯುಆರ್‌ಎಲ್ ನಕಲಿಸಿಕೊಂಡು, ಅದನ್ನು ಈ ಜಾಲತಾಣದ ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ, ಡೌನ್‌ಲೋಡ್ ಎಂದು ಬರೆದಿರುವ ಬಟನ್ ಮೇಲೆ ಕ್ಲಿಕ್ ಮಾಡಿದರಾಯಿತು. ನಿಮ್ಮ ಕಂಪ್ಯೂಟರಿನ ಡೌನ್‌ಲೋಡ್ ಎಂಬ ಫೋಲ್ಡರ್‌ನಲ್ಲಿ ಈ ವೀಡಿಯೋ ಬಂದು ಕುಳಿತಿರುತ್ತದೆ. ನೆನಪಿಡಿ, ಇಂಥ ಯಾವುದೇ ವೀಡಿಯೋಗಳನ್ನು ಆನಂದಿಸಬಹುದೇ ಹೊರತು, ಅನುಮತಿಯಿಲ್ಲದೆ ಬೇರೆಡೆ ಬಳಸುವಂತಿಲ್ಲ.
ಇವನ್ನೂ ನೋಡಿ
ವೈಫೈ ಡಾಂಗಲ್ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ
ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿರುವುದು ಇಂಟರ್ನೆಟ್ ಸ್ಪೀಡ್. ಝೂಮ್, ಸ್ಕೈಪ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್ - ಇತ್ಯಾದಿಗಳ ಮೂಲಕ ಕಚೇರಿ ವಿಡಿಯೊ...