ಸರ್ವಜ್ಞ ಪ್ರತಿಮೆಯನ್ನು ಚೆನ್ನೈಯಲ್ಲಿ ಪ್ರಶಸ್ತವಲ್ಲದ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಓಕೆ, ತೀರ್ಮಾನ ಮಾಡಿಯಾಗಿದೆ. ಆದರೆ, ಚೆನ್ನೈ ಕನ್ನಡಿಗರನ್ನು ಈ ಪರಿ ನಿರ್ಲಕ್ಷಿಸಿದ್ದು ಸರಿಯೇ
ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರಿಗೆ ಅಟ್ಟಣೆ ನಡೆದಿದೆ. ಆದರೆ, ಚೆನ್ನೈಯಲ್ಲಿ? ಅಲ್ಲಿರುವ ಕನ್ನಡಿಗರಿಗೇ ಸರಿಯಾದ ಆಹ್ವಾನವಿಲ್ಲ. ಅರ್ಧ ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದ ಕನ್ನಡ ಸಂಘಗಳನ್ನೆಲ್ಲ ಉಪೇಕ್ಷಿಸಲಾಗಿದೆ.
ಛೆ! ಹೊರ ನಾಡ ಕನ್ನಡಿಗರಿಗೆ ಎಂಥ ದುರಂತ ಸ್ಥಿತಿ?
ಈ ಬಗೆಗೊಂದು ವಿಸ್ತೃತ ಲೇಖನ ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.






