Avinash B
Apple Watch Series 7 Review: ದೊಡ್ಡ ಸ್ಕ್ರೀನ್, ವೇಗದ ಚಾರ್ಜಿಂಗ್
ಹಿಂದಿನ ವಾಚ್‌ಗೆ ಹೋಲಿಸಿದರೆ, ಅತ್ಯಾಧುನಿಕ ಎಸ್7 ಚಿಪ್‌ಸೆಟ್‌ನಿಂದಾಗಿ ಕಾರ್ಯಾಚರಣೆಯು ಅತ್ಯಂತ ಸುಲಲಿತವಾಗಿದ್ದು, ವೇಗವಾಗಿದೆ. ನಿದ್ರೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದರ 'ಹೆಲ್ತ್' ಆ್ಯಪ್‌ನಲ್ಲಿ ಅಡಕವಾಗಿದ್ದು, ಇದರ ಬಳಕೆಯೂ ಸೇರಿದಂತೆ ಸುಮಾರು ಒಂದುವರೆ ದಿನ ಬ್ಯಾಟರಿ ಚಾರ್ಜ್ ಇರುತ್ತದೆ. ಸುಮಾರು ಅರ್ಧ ಗಂಟೆಯ ನಡಿಗೆಯನ್ನು ದಾಖಲಿಸಿದರೆ, ಶೇ.7ರಷ್ಟು ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ.
Apple iPhone, iPad, Mac ಸಾಧನಗಳಲ್ಲಿ ಫೈಲ್ ವಿನಿಮಯಕ್ಕೆ ‘ಏರ್‌ಡ್ರಾಪ್’
ಆ್ಯಪಲ್ ಸಾಧನಗಳ ನಡುವೆ ವೈರ್ ಇಲ್ಲದೆಯೇ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಅವುಗಳಲ್ಲಿರುವ ಏರ್‌ಡ್ರಾಪ್ ಎಂಬ ಆ್ಯಪ್ ನೆರವಾಗುತ್ತದೆ. ಇದು ಐಒಎಸ್ (ಆ್ಯಪಲ್‌ನ ಕಾರ್ಯಾಚರಣಾ ವ್ಯವಸ್ಥೆ) ಇರುವ ಸಾಧನಗಳಿಗಷ್ಟೇ ಲಭ್ಯ. ಇದು ಯಾವುದೇ ಪ್ರತ್ಯೇಕ ತಂತ್ರಾಂಶ ಅಳವಡಿಸದೆಯೇ, ಅತ್ಯಂತ ವೇಗವಾಗಿ ಫೈಲ್ ವರ್ಗಾಯಿಸಲು ಸಹಾಯ ಮಾಡುತ್ತದೆ.
iPad 9th Gen Review: ಅದ್ಭುತ ವೇಗದ ಬ್ರೌಸಿಂಗ್, ಕಣ್ಣುಗಳಿಗೆ ಹಿತಕರ
ಟ್ಯಾಬ್ಲೆಟ್ ಅಥವಾ ಐಪ್ಯಾಡ್ - ಇವು ಸ್ಮಾರ್ಟ್ ಫೋನ್‌ಗಿಂತ ದೊಡ್ಡದಾದ, ಆದರೆ ಲ್ಯಾಪ್‌ಟಾಪ್‌ಗಳಿಗಿಂತ ಚಿಕ್ಕದಾದ, ಎಲ್ಲಿ ಬೇಕೆಂದರಲ್ಲಿ ಒಯ್ಯಲು ಸುಲಭವಾಗುವ ಗ್ಯಾಜೆಟ್‌ಗಳು. ಜನರಿಗೆ,...
Samsung Galaxy M52: ಸ್ಲಿಮ್ ಮತ್ತು ಲೈಟ್ ಆದರೆ ಶಕ್ತಿಶಾಲಿ ಸ್ಮಾರ್ಟ್‌ಫೋನ್
120Hz AMOLED ಸ್ಕ್ರೀನ್, ವೇಗದ ಸ್ನ್ಯಾಪ್‌ಡ್ರ್ಯಾಗನ್ 778G ಪ್ರೊಸೆಸರ್, 5G ಸಂಪರ್ಕ ವ್ಯವಸ್ಥೆ ಮತ್ತು ಬಿಕ್ಸ್‌ಬಿ ಎಂಬ ಜಾಣ ಸಹಾಯಕ ತಂತ್ರಾಂಶದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ52 ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮಧ್ಯಮ ದರ್ಜೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ, ತೀರಾ ಹಗುರವಾದ ಮತ್ತು ಅತ್ಯುತ್ತಮ ಬ್ಯಾಟರಿಯುಳ್ಳ ಹೊಚ್ಚ ಹೊಸ ಸ್ಮಾರ್ಟ್ ಸಾಧನವಿದು.
Apple iPhone 13 Pro: ಛಾಯಾಗ್ರಾಹಕರ ಕನಸಿನ ಫೋನ್, ಪವರ್ ಫುಲ್ ಮತ್ತು ಗಟ್ಟಿ...
Apple iPhone 13 Pro: ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಲಾಗಿದೆ, ಅದ್ಭುತವಾದ ಡಿಸ್‌ಪ್ಲೇ, ಬ್ಯಾಟರಿ ಚಾರ್ಜಿಂಗ್ ಬಾಳಿಕೆ, ವೇಗ ಹೆಚ್ಚಿದೆ, 120Hz ರೀಫ್ರೆಶ್ ರೇಟ್ ಮೂಲಕ ಸುಲಲಿತ ಬ್ರೌಸಿಂಗ್/ಸ್ವೈಪಿಂಗ್ - ಇವು ಎದ್ದುಕಾಣುವ ವಿಚಾರಗಳು. ಹಿಂದಿನ ಐಫೋನ್ ಆವೃತ್ತಿ ಇದ್ದವರು, ಹೆಚ್ಚು ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮವಾದ ಕ್ಯಾಮೆರಾ ಬೇಕು, ಐಷಾರಾಮಿ ಫೋನ್ ಬೇಕು ಅಂತ ಅನ್ನಿಸಿದರೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
ಆ್ಯಪಲ್ ಸಾಧನಗಳಿಗೆ iOS 15: ಉಪಯುಕ್ತ 6 ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ಐಫೋನ್ ಬಳಕೆದಾರರಿಗೆ ಕಳೆದ ವಾರದಿಂದ (ಸೆ.21) ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 15 ಬಿಡುಗಡೆಯಾಗಿದೆ. ಆರು ವರ್ಷದ ಹಿಂದಿನ ಐಫೋನ್ 6S ನಂತರದ ಎಲ್ಲ ಐಫೋನ್‌ಗಳಿಗೆ ಇದು ಲಭ್ಯ....
ಇದು ಬರೇ ಭಾವಗಾನಯಲ್ಲ, ಯಕ್ಷ-ಭಾವಗಾನ!
ಯಕ್ಷಗಾನವು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಉಪೇಕ್ಷೆಗೊಳಪಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲ ಕಲಾಪ್ರಕಾರಗಳನ್ನೂ ತನ್ನೊಳಗೆ ಆವಾಹಿಸಿಕೊಳ್ಳಬಹುದಾದ ಸ್ಥಿತಿಸ್ಥಾಪಕತ್ವ ಗುಣವಿರುವ ಯಕ್ಷಗಾನವು ಎಲ್ಲ ರೀತಿಯ ಪದ್ಯಸಾಹಿತ್ಯವನ್ನೂ ತನ್ನೊಳಗೆ ಬೆಸೆದುಕೊಳ್ಳುವಷ್ಟು ಸಶಕ್ತವಾಗಿದೆ. ಹಾಡುಗಳಲ್ಲಿ...
Nokia C01 Plus Review: ಅಗ್ಗದ ಆದರೆ ಆಧುನಿಕ ಸೌಕರ್ಯದ ನೋಕಿಯಾ ಸ್ಮಾರ್ಟ್‌ಫೋನ್
ವಿಶ್ವಾಸಾರ್ಹ ನೋಕಿಯಾ ಬ್ರ್ಯಾಂಡ್‌ನ ಪೂರ್ಣ ಸದುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿರುವ ಹೆಚ್ಎಂಡಿ ಗ್ಲೋಬಲ್, ಇದೀಗ ಬಜೆಟ್ ಶ್ರೇಣಿಯಲ್ಲಿ, ಮೊದಲ ಸ್ಮಾರ್ಟ್ ಫೋನ್ ಕೊಳ್ಳುವವರನ್ನೇ ಗುರಿಯಾಗಿರಿಸಿ ಸಿ01 ಪ್ಲಸ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ....
ಟಿವಿ ಖರೀದಿಗೆ ಸಲಹೆ: ಏನಿದು LED, OLED, QLED ಪರದೆ?
ಡೂಮ್ ಇರುವ ಅಂದರೆ ಕ್ಯಾಥೋಡ್ ರೇ ಟ್ಯೂಬ್ (ಸಿಆರ್‌ಟಿ) ಟಿವಿಗಳು ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತಿದ್ದವು ಮತ್ತು ಈಗಾಗಲೇ ಹೆಚ್ಚಿನವರ ಮನೆಗಳಿಂದ ಕಾಲ್ಕಿತ್ತಿವೆ. ಅವುಗಳ ಸ್ಥಾನದಲ್ಲಿ ನೋಡಲು ತೆಳ್ಳಗಿರುವ, ಗೋಡೆಯ ಮೇಲೆ...
Nokia C20 Plus: ಬಜೆಟ್ ಶ್ರೇಣಿಯಲ್ಲಿ ಆಧುನಿಕ ವೈಶಿಷ್ಟ್ಯಗಳ ಫೋನ್
ನೋಕಿಯಾ ಸಿ20 ಪ್ಲಸ್ 3GB/32GB ಮಾದರಿಯು, ಉತ್ತಮ ಬಿಲ್ಡ್ ಗುಣಮಟ್ಟವನ್ನೂ, ಬ್ಯಾಟರಿ ಬಾಳಿಕೆಯನ್ನೂ ಹೊಂದಿದೆ. ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸರಳ ಯೂಸರ್ ಇಂಟರ್ಫೇಸ್ ಮೂಲಕ ಗಮನ ಸೆಳೆಯುತ್ತದೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದ್ದು, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಅಥವಾ ಎರಡನೇ ಫೋನ್ ಬೇಕೆಂದುಕೊಳ್ಳುವವರಿಗೆ ಇಷ್ಟವಾಗಬಹುದಾದ ಬಜೆಟ್ ಶ್ರೇಣಿಯ ಫೋನ್ ಇದು.