Home Authors Posts by Avinash B

Avinash B

761 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

WhatsApp Tricks: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

WhatsApp Tricks: ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ.

Crossbeats Ignite Lyt Smart Watch Review: ಉತ್ತಮ ಬ್ಯಾಟರಿಯ ಅಗ್ಗದ ಸ್ಮಾರ್ಟ್‌ವಾಚ್

Crossbeats Ignite Lyt Smart Watch Review: ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್‌ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್‌ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್‌ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್‌ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.

Apple Apps: ಶಬ್ದ ಭಂಡಾರ ವೃದ್ಧಿಗೆ LookUp, ಮಕ್ಕಳಿಗಾಗಿ Kiddopia ಆ್ಯಪ್, ತೊದಲುವಿಕೆ ನಿಯಂತ್ರಣಕ್ಕೆ...

Apple Apps: ಎಲ್ಲವೂ ಅಂಗೈಯಲ್ಲೇ ದೊರೆಯುತ್ತದೆ ಎಂಬ ಈ ತಂತ್ರಜ್ಞಾನಾಧಾರಿತ ಕಾಲದಲ್ಲಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಬಹುದಾದ, ತೊದಲುವಿಕೆ ನಿಯಂತ್ರಣಕ್ಕೆ ನೆರವಾಗುವ ಮತ್ತು ದೊಡ್ಡವರಿಗೂ ನೆರವಾಗಬಲ್ಲ ಐದು ಆ್ಯಪ್‌ಗಳ ಪರಿಚಯ ಇಲ್ಲಿದೆ. ಇವು ಮೊಬೈಲ್ ಸ್ಕ್ರೀನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಿಗೆ ಜ್ಞಾನವನ್ನೂ ನೀಡಬಹುದಾದ ಆ್ಯಪ್‌ಗಳಾಗಿದ್ದು, ವಿಶೇಷವಾಗಿ Apple ಕಂಪನಿಯು ಡೆವಲಪರ್‌ಗಳಿಗೆ ವಿಶೇಷ ಪ್ರೋತ್ಸಾಹ ನೀಡಿ ರೂಪಿಸಿದವುಗಳು.

Windows 11 Tricks: ವಿಂಡೋಸ್11ರಲ್ಲಿ ಕೆಲಸ ಸುಲಭವಾಗಿಸಲು ಒಂದಿಷ್ಟು ಟ್ರಿಕ್ಸ್

Windows 11 Tricks: ಕಂಪ್ಯೂಟರ್ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಬಳಸುತ್ತಿರುವವರಲ್ಲಿ ಹೆಚ್ಚಿನ ಮಂದಿ ಇತ್ತೀಚೆಗೆ ಹೊಚ್ಚ ಹೊಸ ವಿಂಡೋಸ್ 11 ಕಾರ್ಯಾಚರಣೆ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿರಬಹುದು ಅಥವಾ ಹೊಸ ವಿಂಡೋಸ್ ಸಾಧನ ಖರೀದಿಸಿದಾಗ ವಿಂಡೋಸ್ 11 ಜೊತೆಯಾಗಿ ಬಂದಿರಬಹುದು. ಹೊಸ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಬಂದಾಗಲೆಲ್ಲಾ ಏನೋ ವಿಶೇಷವಿದೆ ಎಂಬ ಬಗ್ಗೆ ಕುತೂಹಲ ಸಹಜ. ಹಿಂದಿನ ಸಾಧನಗಳಂತಲ್ಲದ ವಿಂಡೋಸ್ 11 ಒಎಸ್, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇಂಥದ್ದರಲ್ಲಿ, ಈ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯ ಪರಿಪೂರ್ಣ ಪ್ರಯೋಜನಕ್ಕೆ ಸಹಕರಿಸಬಲ್ಲ ಕೆಲವೊಂದು ಟಿಪ್ಸ್ ಇಲ್ಲಿವೆ.

Samsung Galaxy A73 Review: ಅತ್ಯಾಧುನಿಕ ವೈಶಿಷ್ಟ್ಯಗಳ 108MP ಕ್ಯಾಮೆರಾ ಫೋನ್

Samsung Galaxy A73 Review in Kannada: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲೇ ಅತ್ಯಾಧುನಿಕ ಮತ್ತು ಫ್ಲ್ಯಾಗ್‌ಶಿಪ್ ಮಾದರಿಯ ವೈಶಿಷ್ಟ್ಯಗಳುಳ್ಳ ಗ್ಯಾಲಕ್ಸಿ ಎ73 ಫೋನ್, ಏ.11ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 8GB/256GB ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 ಫೋನ್ ಹೇಗಿದೆ? ಒಂದು ವಾರದ ಬಳಕೆಯಲ್ಲಿ ಕಂಡುಬಂದ ಅಂಶಗಳು ಇಲ್ಲಿವೆ.

Samsung Galaxy M33 5G Review: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

Samsung Galaxy M33 5G. ಹಿಂದಿನ ಎಂ32ರ ಉತ್ತಮ ಅಪ್‌ಗ್ರೇಡ್ ಇದು. ವಿಶೇಷವಾಗಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಧುನಿಕ ಫೋನ್‌ಗಳಾದ ಎ53 5ಜಿಯಲ್ಲಿ ಬಳಕೆಯಾಗಿರುವ ಹೊಸ ಎಕ್ಸಿನೋಸ್ ಚಿಪ್ ಇಲ್ಲೂ ಬಳಕೆಯಾಗಿದ್ದು, 120Hz ರಿಫ್ರೆಶ್ ರೇಟ್, 6000mAh ಬ್ಯಾಟರಿ ಇದರಲ್ಲಿಯೂ ಇದೆ.

How To: Google Lens ಬಳಸುವುದು ಹೇಗೆ?

Google Lens: ಸ್ಮಾರ್ಟ್‌ಫೋನ್ ಇದ್ದವರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಥವಾ ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಲಕ್ಷಾಂತರ ಆ್ಯಪ್‌ಗಳಲ್ಲಿ (ಅಪ್ಲಿಕೇಶನ್‌ಗಳು ಅಥವಾ ಕಿರು ತಂತ್ರಾಂಶಗಳು) ಯಾವುದನ್ನು ಬಳಸಬೇಕು, ಯಾವುದು ಬೇಕಾಗಿಲ್ಲ ಎಂಬುದೇ ಗೊಂದಲದ ವಿಷಯ. ಇದರ ಮಧ್ಯೆ, ಈ ತಂತ್ರಜ್ಞಾನ ಯುಗದಲ್ಲಿ ನಮಗೆ ಪ್ರತಿಕ್ಷಣವೂ ನೆರವಾಗಬಲ್ಲ ಆ್ಯಪ್‌ಗಳಲ್ಲಿ ಪ್ರಮುಖವಾದದ್ದು Google Lens. ಇದರ ಕೆಲಸವನ್ನು ಒಂದೇ ವಾಕ್ಯದಲ್ಲಿ ವಿವರಿಸಬಹುದಾದರೆ, ನಾವೇನು ನೋಡುತ್ತೇವೆಯೋ, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಮುಂದೆ ಧುತ್ತನೇ ಮುಂದಿಡಬಲ್ಲ ಆ್ಯಪ್ ಇದು.

iPhone SE 2022 Review: ಆಕರ್ಷಕ, ಹಗುರ, ವೇಗಗಳ ಸಮ್ಮಿಶ್ರಣ

iPhone SE 2022 Review: ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 2022 ಆವೃತ್ತಿಯು, ಆ್ಯಪಲ್ ಹೊರತಂದಿರುವ ಅಗ್ಗದ ಐಫೋನ್ (ಎಸ್ಇ) ಸರಣಿಯ 3ನೇ ಪೀಳಿಗೆಯದು. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಐಫೋನ್ ಎಸ್ಇ 2022 ಹೇಗಿದೆ? ಇಲ್ಲಿದೆ ಮಾಹಿತಿ.

Samsung Galaxy S22: ಅದ್ಭುತ ಕ್ಯಾಮೆರಾವುಳ್ಳ, ಹಗುರವಾದ ಐಫೋನ್ ಪ್ರತಿಸ್ಫರ್ಧಿ

ಐಫೋನ್‌ಗೆ ಪ್ರತಿಸ್ಫರ್ಧಿ ಎಂದೆಲ್ಲ ಚರ್ಚೆಗೊಳಗಾದ Samsung Galaxy S22 Review ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22 ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಂದಿದೆ. ಇದರ 8 ಜಿಬಿ RAM, 128GB ಸ್ಟೋರೇಜ್‌ನ ಬಿಳಿ ಬಣ್ಣದ ಬೇಸ್ ಮಾಡೆಲ್ ಅನ್ನು ಎರಡು ವಾರ ಬಳಸಿ ನೋಡಿದಾಗ ಅನುಭವಕ್ಕೆ ಬಂದ ವಿಚಾರಗಳು ಇಲ್ಲಿವೆ.

Samsung Galaxy F23 5G Review: ಮಧ್ಯಮ ಶ್ರೇಣಿಯ ಉತ್ತಮ ಫೋನ್

Samsung Galaxy F23 5G 5ಜಿ ಸ್ಮಾರ್ಟ್‌ಫೋನ್ ಮಾ.8ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 4ಜಿಬಿ/128 ಜಿಬಿ ಮಾದರಿಯನ್ನು ಎರಡು ವಾರ ಬಳಸಿ ನೋಡಿದ ಬಳಿಕ, ಈ ಫೋನ್ ಹೇಗಿದೆ? ಮಾಹಿತಿ ಇಲ್ಲಿದೆ.

ಇವನ್ನೂ ನೋಡಿ

ಆಂಡ್ರಾಯ್ಡ್ ಪೈ ಕಾರ್ಯಾಚರಣಾ ಆವೃತ್ತಿಯ ಒನ್‌ಪ್ಲಸ್ 6ಟಿ ಭಾರತದಲ್ಲಿ ಬಿಡುಗಡೆ

ಅವಿನಾಶ್ ಬಿ, ಹೊಸದಿಲ್ಲಿ: ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಲಯದಲ್ಲಿ ನಂ.1 ಸ್ಥಾನಕ್ಕೇರಿರುವ ಚೀನಾದ ಒನ್‌ಪ್ಲಸ್, ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್ 'ಒನ್‌ಪ್ಲಸ್ 6ಟಿ' ಮಾದರಿಯನ್ನು ಮಂಗಳವಾರ ರಾತ್ರಿ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನ KDJW...

HOT NEWS