ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಸದಸ್ಯರು ವಿವೇಚನೆಯಿಲ್ಲದೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರೆ ಅಥವಾ ಫಾರ್ವರ್ಡ್ ಮಾಡುತ್ತಿದ್ದರೆ, ಗ್ರೂಪಿನ ನಿಯಮಗಳಿಗೆ ಬದ್ಧವಾಗಿರದಿದ್ದರೆ, ಅವರೆಲ್ಲರ ಪೋಸ್ಟಿಂಗ್ ಅಧಿಕಾರವನ್ನು ಕಿತ್ತುಕೊಳ್ಳಲು ಗ್ರೂಪ್ ಆಡ್ಮಿನ್‌ಗಳಿಗೆ ಅವಕಾಶ ಇದೆ. ಈ ಹೊಸ ವೈಶಿಷ್ಟ್ಯ ಇತ್ತೀಚೆಗೆ ಎಲ್ಲ ಫೋನ್‌ಗಳಿಗೆ ಬಿಡುಗಡೆಯಾಗಿದ್ದು, ವಾಟ್ಸ್ಆ್ಯಪ್ ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಂಡವರಿಗೆ ಲಭ್ಯ. ಗ್ರೂಪ್ ಆಡ್ಮಿನ್‌ಗಳು ಇತರ ಆಡ್ಮಿನ್‌ಗಳಿಗೆ ಮಾತ್ರವೇ ಪೋಸ್ಟ್ ಮಾಡಲು ಅವಕಾಶ ಮಾಡಿಕೊಡುವ ಆಯ್ಕೆಯಿದ್ದು, ಅದನ್ನು ಹೇಗೆ ಎನೇಬಲ್ ಮಾಡುವುದು? ನಿರ್ದಿಷ್ಟ ಗ್ರೂಪ್ ಓಪನ್ ಮಾಡಿ, ಮೇಲ್ಭಾಗದಲ್ಲಿ ಪ್ರೊಫೈಲ್ ಚಿತ್ರದ ಆಸುಪಾಸು ಕ್ಲಿಕ್ ಮಾಡಿ, ಕೆಳಗೆ ಗ್ರೂಪ್ ಸೆಟ್ಟಿಂಗ್ಸ್ ಅಂತ ಕಾಣಿಸುವಲ್ಲಿ ಒತ್ತಿ. ನಂತರ ‘ಸೆಂಡ್ ಮೆಸೇಜಸ್’ ಕ್ಲಿಕ್ ಮಾಡಿದರೆ, ಎಲ್ಲರಿಗೆ ಅಥವಾ ಆಡ್ಮಿನ್‌ಗಳಿಗೆ ಮಾತ್ರ ಪೋಸ್ಟ್ ಮಾಡುವ ಹಕ್ಕು ಒದಗಿಸುವ ಆಯ್ಕೆ ಕಾಣಿಸುತ್ತದೆ. ಸ್ಪ್ಯಾಮ್ ಹಾಗೂ ಸುಳ್ಳು ಸುದ್ದಿಗಳ ರವಾನೆ ನಿಯಂತ್ರಣಕ್ಕೆ ಗ್ರೂಪ್ ಆಡ್ಮಿನ್‌ಗಳು ಈ ಅವಕಾಶವನ್ನು ಉಪಯೋಗಿಸಿ.
ಇವನ್ನೂ ನೋಡಿ
ಇಂಟರ್ನೆಟ್ ಜಾಲಾಟಕ್ಕೆ ಸುರಕ್ಷಿತ ಮಾರ್ಗ: ಪ್ರೈವೇಟ್ ವಿಂಡೋ ಬಳಸುವುದು ಹೇಗೆ?
ಇಂಟರ್ನೆಟ್ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಈ ದಿನಗಳಲ್ಲಿ ಕಂಪ್ಯೂಟರ್ ವೈರಸ್ ದಾಳಿ, ಖಾಸಗಿತನದ ಭಂಗ (ಪ್ರೈವೆಸಿ ಬ್ರೀಚ್) ಮುಂತಾದವುಗಳಿಂದಾಗಿ ಜಾಗತಿಕವಾಗಿ ಕಂಪ್ಯೂಟರ್ ಬಳಕೆದಾರರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ...