ವಿದೇಶ ಪ್ರವಾಸ ಮಾಡುವವರಿಗೆ ಗೂಗಲ್ ಒದಗಿಸಿರುವ ಗೂಗಲ್ ಟ್ರಾನ್ಸ್‌ಲೇಟ್ ಎಂಬ ಆ್ಯಪ್ ಅತ್ಯುತ್ತಮ ಸಹಕಾರ ಒದಗಿಸುತ್ತಿದೆ. ಇದು ಜಗತ್ತಿನ 103 ಆ್ಯಪ್‌ಗಳ ನಡುವೆ ಭಾಷಾಂತರ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಅಳವಡಿಸಿಕೊಂಡರೆ, ಯಾವುದೇ ಆ್ಯಪ್ ಓದುತ್ತಿರುವಾಗ, ಬೇರೆ ಭಾಷೆಯ ಸುದ್ದಿ ಅಥವಾ ಪದ ಕಾಣಿಸಿದರೆ, ಅದರ ಅರ್ಥವನ್ನು ತಕ್ಷಣ ತಿಳಿದುಕೊಳ್ಳಲು ಸಹಕಾರಿ. ಇಂಟರ್ನೆಟ್ ಸಂಪರ್ಕವಿಲ್ಲದಿರುವಾಗಲೂ ಇದು 59 ಭಾಷೆಗಳನ್ನು ಪರಸ್ಪರ ಅನುವಾದ ಮಾಡುತ್ತದೆ. ಇಷ್ಟಲ್ಲದೆ 38 ಭಾಷೆಗಳಲ್ಲಿ, ಕ್ಯಾಮೆರಾದ ಮೂಲಕ ಯಾವುದಾದರೂ ಪಠ್ಯವನ್ನು ಸೆರೆಹಿಡಿದರೆ ಅದನ್ನೂ ಭಾಷಾಂತರಿಸುವ ಸಾಮರ್ಥ್ಯವು ಈ ಟ್ರಾನ್ಸ್‌ಲೇಟ್ ಆ್ಯಪ್‌ಗೆ ಇದೆ. ಇಷ್ಟೇ ಅಲ್ಲದೆ, ಧ್ವನಿ ಮೂಲಕವೂ 32 ಭಾಷೆಗಳ ನಡುವೆ ಭಾಷಾಂತರಿಸಿಕೊಳ್ಳಬಹುದು. ಇದರಲ್ಲಿ ಕನ್ನಡ ಸಹಿತ ಪ್ರಮುಖ ಭಾರತೀಯ ಭಾಷೆಗಳಿಗೂ ಬೆಂಬಲವಿದೆ.
ಇವನ್ನೂ ನೋಡಿ
ವಿರೋಧಿಗಳನ್ನು ನಿರುತ್ತರರಾಗಿಸೋದು ಹೇಗೆ?
ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ? ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ...


