ವಿದೇಶ ಪ್ರವಾಸ ಮಾಡುವವರಿಗೆ ಗೂಗಲ್ ಒದಗಿಸಿರುವ ಗೂಗಲ್ ಟ್ರಾನ್ಸ್‌ಲೇಟ್ ಎಂಬ ಆ್ಯಪ್ ಅತ್ಯುತ್ತಮ ಸಹಕಾರ ಒದಗಿಸುತ್ತಿದೆ. ಇದು ಜಗತ್ತಿನ 103 ಆ್ಯಪ್‌ಗಳ ನಡುವೆ ಭಾಷಾಂತರ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಅಳವಡಿಸಿಕೊಂಡರೆ, ಯಾವುದೇ ಆ್ಯಪ್ ಓದುತ್ತಿರುವಾಗ, ಬೇರೆ ಭಾಷೆಯ ಸುದ್ದಿ ಅಥವಾ ಪದ ಕಾಣಿಸಿದರೆ, ಅದರ ಅರ್ಥವನ್ನು ತಕ್ಷಣ ತಿಳಿದುಕೊಳ್ಳಲು ಸಹಕಾರಿ. ಇಂಟರ್ನೆಟ್ ಸಂಪರ್ಕವಿಲ್ಲದಿರುವಾಗಲೂ ಇದು 59 ಭಾಷೆಗಳನ್ನು ಪರಸ್ಪರ ಅನುವಾದ ಮಾಡುತ್ತದೆ. ಇಷ್ಟಲ್ಲದೆ 38 ಭಾಷೆಗಳಲ್ಲಿ, ಕ್ಯಾಮೆರಾದ ಮೂಲಕ ಯಾವುದಾದರೂ ಪಠ್ಯವನ್ನು ಸೆರೆಹಿಡಿದರೆ ಅದನ್ನೂ ಭಾಷಾಂತರಿಸುವ ಸಾಮರ್ಥ್ಯವು ಈ ಟ್ರಾನ್ಸ್‌ಲೇಟ್ ಆ್ಯಪ್‌ಗೆ ಇದೆ. ಇಷ್ಟೇ ಅಲ್ಲದೆ, ಧ್ವನಿ ಮೂಲಕವೂ 32 ಭಾಷೆಗಳ ನಡುವೆ ಭಾಷಾಂತರಿಸಿಕೊಳ್ಳಬಹುದು. ಇದರಲ್ಲಿ ಕನ್ನಡ ಸಹಿತ ಪ್ರಮುಖ ಭಾರತೀಯ ಭಾಷೆಗಳಿಗೂ ಬೆಂಬಲವಿದೆ.
APLICATIONS
ಕಂಪ್ಯೂಟರಿನಿಂದ ಮೆಸೆಂಜರ್, ವಾಟ್ಸಾಪ್, ಇಮೇಲ್ಗೆ ಉತ್ತರಿಸಲು ಪುಷ್ಬುಲೆಟ್
ನಾವೇನೋ ಕೆಲಸ ಮಾಡುತ್ತಿರುತ್ತೇವೆ, ದಿಢೀರನೇ ಫೋನ್ಗೆ ಬಂದ ಸಂದೇಶವು ನಮ್ಮ ಮನಸ್ಸನ್ನು ಬೇರೆಡೆ ಸೆಳೆದು, ಅದರತ್ತ ಕೈಚಾಚಲು ಪ್ರೇರೇಪಿಸಬಹುದು. ಇದರಿಂದ ಕೆಲಸಕ್ಕೆ ಅಡಚಣೆಯಾಗಬಹುದು. ಇಂತಹಾ ಸಂದರ್ಭದಲ್ಲಿ, ಸಂದೇಶಗಳೆಲ್ಲವೂ ಕಂಪ್ಯೂಟರ್ ಪರದೆಯಲ್ಲೇ ಕಾಣಿಸಿದರೆ, ಹಿಡಿದ...