ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು ಇದು ಕೆಲವೊಮ್ಮೆ ಮಾತ್ರ ಯಾಕಾಗಿ ಕಾಣಿಸಿಕೊಳ್ಳುತ್ತದೆ? ವೀಡಿಯೋ ಅಥವಾ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಮಾತ್ರವೇ ಈ ಐಕಾನ್ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು (ಒಂದೊಂದರಲ್ಲಿ ಒಂದೊಂದು ವೆಬ್ ಪುಟ) ಕೆಲಸ ಮಾಡುತ್ತಾರೆ. ದಿಢೀರನೇ ಸದ್ದು ಕೇಳಿಸಿದಾಗ ಯಾವುದರಲ್ಲಿ ವೀಡಿಯೊ ಅಥವಾ ಆಡಿಯೊ ಪ್ಲೇ ಆಗುತ್ತದೆ ಎಂಬುದು ತಿಳಿಯುವುದಿಲ್ಲ. ಯಾವ ಟ್ಯಾಬ್‌ನಲ್ಲಿ ಸದ್ದು ಕೇಳಿಬರುತ್ತಿದೆ ಎಂಬುದನ್ನು ತಿಳಿಯುವುದಕ್ಕಾಗಿಯೇ ಈ ಐಕಾನ್ ಇದೆ.
ಇವನ್ನೂ ನೋಡಿ
ಟೆಕ್ಟಾನಿಕ್: ವಾಟ್ಸ್ಆ್ಯಪ್ ಗ್ರೂಪ್ ಮ್ಯೂಟ್ ಮಾಡಿ
ಯಾರೋ ಒತ್ತಾಯಪಟ್ಟು ನಿರ್ದಿಷ್ಟ ವಾಟ್ಸ್ಆ್ಯಪ್ ಗ್ರೂಪಿಗೆ ನಿಮ್ಮನ್ನು ಸೇರಿಸಿದ್ದಾರೆ. ನಿಮಗಿಷ್ಟವಿಲ್ಲದ ಗುಡ್ಮಾರ್ನಿಂಗ್, ಗುಡ್ನೈಟ್ ಹಾಗೂ ಖಚಿತವಲ್ಲದ ಫಾರ್ವರ್ಡ್ ಮೆಸೇಜುಗಳೇ ಅದರಲ್ಲಿ ಹರಿದಾಡುತ್ತವೆ ಹೊರತು, ಉಪಯೋಗಕ್ಕಿಲ್ಲ. ಹೊರಬರುವಂತಿಲ್ಲ, ದಾಕ್ಷಿಣ್ಯ. ಇಂತಹಾ ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ? ವಾಟ್ಸ್ಆ್ಯಪ್...


