ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ ಶಾರ್ಟ್ ಕಟ್ ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. F11 ಬಟನ್ ಒತ್ತಿದರಾಯಿತು. ಆ ಪುಟ ಬಿಟ್ಟು ಬೇರೇನೂ ಕಾಣದಂತೆ ಅದು ಸ್ಕ್ರೀನನ್ನು ಆವರಿಸಿರುತ್ತದೆ. ಪುನಃ ಹಿಂದಿನ ಸ್ಥಿತಿಗೆ ಮರಳಲು ಕೀಬೋರ್ಡ್‌ನಲ್ಲಿ ಪುನಃ F11 ಬಟನ್ ಅದುಮಿದರಾಯಿತು.
ಇವನ್ನೂ ನೋಡಿ
‘ಧರ್ಮ ರಾಜಕೀಯ’ ಬೇಡ, ರಾಜಕೀಯ ಧರ್ಮ ಇರಲಿ
ಮಾಲೆಗಾಂವ್ನಲ್ಲಿ ಐದು ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟ ಪ್ರಕರಣವೊಂದು ಇಡೀ ದೇಶದ ಮಾನವನ್ನೇ ಹರಾಜು ಮಾಡುವಷ್ಟರ ಮಟ್ಟಿಗೆ ಬೆಳೆಯುತ್ತಿರುವುದನ್ನು ನೋಡಿದರೆ, ಈಗಾಗಲೇ ನಡೆಯುತ್ತಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು ಸದ್ಯೋಭವಿಷ್ಯದಲ್ಲೇ...




