ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್ ಬಿಡುಗಡೆಗೊಳಿಸಿದೆ. ಅಂದರೆ, ಕಂಪ್ಯೂಟರಿನಲ್ಲಿ ಯಾವುದಾದರೂ ಬ್ರೌಸರ್ ಮೂಲಕವೇ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮೂಲಕ ನೀವು ಚಾಟ್ ನಡೆಸಬಹುದಾಗಿದೆ. Messenger.com ಎಂದು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಲಾಗಿನ್ ಐಡಿ, ಪಾಸ್‌ವರ್ಡ್ ಮೂಲಕ ಒಳ ಹೊಕ್ಕರೆ ಸಾಕು. ಕಂಪ್ಯೂಟರಿನಿಂದಲೇ ಫೇಸ್‌ಬುಕ್ ಮಾತುಕತೆ ಮುಂದುವರಿಸಬಹುದು.
ಇವನ್ನೂ ನೋಡಿ
ಅಂತರ್ಜಾಲ ಸ್ವಾತಂತ್ರ್ಯಕ್ಕಾಗಿ ನೆಟ್ಟಿಗರ ಗಟ್ಟಿ ಧ್ವನಿ
ಇಂಟರ್ನೆಟ್ನಲ್ಲಿ ಯೂಟ್ಯೂಬ್ ಆಗಿರಲಿ, ವೆಬ್ ಸೈಟ್ ಆಗಿರಲಿ, ವಾಟ್ಸಾಪ್ ಇರಲಿ, ಫೇಸ್ ಬುಕ್ ಇರಲಿ, ಅಥವಾ ಟ್ವಿಟರೇ ಆಗಿರಲಿ; ಎಲ್ಲ ಮಾಹಿತಿಯೂ ಸಮಾನ. ನಿರ್ದಿಷ್ಟ ಮಾಹಿತಿಯನ್ನು ಮಾತ್ರ ಉಚಿತವಾಗಿ ನೀಡಿ, ಉಳಿದವುಗಳಿಗೆ ತಡೆಯೊಡ್ಡುವ...