ಟೆಕ್ ಟಾನಿಕ್: ನೇರವಾಗಿ ಡೆಸ್ಕ್‌ಟಾಪ್ ನೋಡಲು

2
702

ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿರುವಾಗ ಬ್ರೌಸರ್, ವಿಡಿಯೋ ಪ್ಲೇಯರ್, ಇಮೇಲ್ ಇತ್ಯಾದಿ ಹಲವಾರು ವಿಂಡೋಗಳನ್ನು ಓಪನ್ ಮಾಡಿಟ್ಟಿರುತ್ತೇವೆ. ಆದರೆ ತಕ್ಷಣವೇ ಡೆಸ್ಕ್‌ಟಾಪ್‌ನಲ್ಲಿರುವ ಶಾರ್ಟ್‌ಕಟ್ ಅಥವಾ ಒಂದು ಫೈಲನ್ನು ತೆರೆಯಬೇಕಾಗುತ್ತದೆ, ಅದಕ್ಕಾಗಿ ಡೆಸ್ಕ್‌ಟಾಪ್ ಸ್ಕ್ರೀನ್ ನೋಡಬೇಕಾಗುತ್ತದೆ. ಪ್ರತಿಯೊಂದು ವಿಂಡೋವನ್ನೂ ಒಂದೊಂದಾಗಿ ಮಿನಿಮೈಸ್ ಮಾಡುತ್ತಾ ಹೋಗುವುದು ತುಂಬಾ ತ್ರಾಸ. ಇಂತಹಾ ಸಂದರ್ಭದಲ್ಲಿ ನೇರವಾಗಿ ಡೆಸ್ಕ್‌ಟಾಪ್ ಸ್ಕ್ರೀನ್‌ಗೆ ಹೋಗಲು ಏನು ಮಾಡಬೇಕು? ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ವಿಂಡೋಸ್ ಲಾಂಛನವಿರುವ ಒಂದು ಬಟನ್ ಇರುತ್ತದೆ. ಅದನ್ನು ಹಾಗೂ D ಅಕ್ಷರವನ್ನು ಕ್ಲಿಕ್ ಮಾಡಿದರೆ, ನೇರವಾಗಿ ಡೆಸ್ಕ್‌ಟಾಪ್ ಕಾಣಿಸುತ್ತದೆ. ಇದೊಂದು ಅತೀ ಹೆಚ್ಚು ಅನುಕೂಲ ಕಲ್ಪಿಸುವ ಕೀಬೋರ್ಡ್ ಶಾರ್ಟ್‌ಕಟ್ ವಿಧಾನ. ಟ್ರೈ ಮಾಡಿ ನೋಡಿ.

2 COMMENTS

  1. ವಿಂಡೋಸ್ ೭ ನಲ್ಲಿ ಇನ್ನೊಂದು ಸುಲಭವಾದ ಶಾರ್ಟ್ ಕಟ್ ಇದೆ,ಮೌಸ್ ಅನ್ನು ಬಲ ಭಾಗದಲ್ಲಿ ಕೆಳಗಿನ ಮೂಲೆಗೆ ಹೋಗಿ ಕ್ಲಿಕ್ ಮಾಡಿದರಾಯಿತು

LEAVE A REPLY

Please enter your comment!
Please enter your name here