ಫೇಸ್‌ಬುಕ್ ಪ್ರೊಫೈಲ್ ಚಿತ್ರಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಹೊಸ ಟೂಲ್ ಒಂದನ್ನು ಫೇಸ್‌ಬುಕ್ ಪರಿಚಯಿಸಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಫೇಸ್‌ಬುಕ್‌ನಲ್ಲಿ ಪಿಕ್ಚರ್ ಗಾರ್ಡ್ ಎಂಬ ಟೂಲ್ ಎನೇಬಲ್ ಮಾಡಿಕೊಂಡರೆ, ಚಿತ್ರದ ಸುತ್ತ ನೀಲಿ ಬಣ್ಣದ ರೇಖೆಯೊಂದಿಗೆ ಶೀಲ್ಡ್ ಐಕಾನ್ ಕಾಣಿಸುತ್ತದೆ. ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ, ಪಾಪ್ ಅಪ್ ಆಗುವ ವಿಂಡೋದಲ್ಲಿ, ಕೆಳ ಭಾಗದಲ್ಲಿ Turn on profile picture guard ಅಂತ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರಾಯಿತು. ಅಂತೆಯೇ, ಪ್ರೊಫೈಲ್ ಚಿತ್ರಕ್ಕೆ ರಕ್ಷಣೆ ಒದಗಿಸುವುದು ಹೇಗೆಂದು ಹಂತ ಹಂತವಾಗಿ ತಿಳಿಸಬಲ್ಲ ವೈಶಿಷ್ಟ್ಯವೂ ಶೀಘ್ರದಲ್ಲೇ ಎಲ್ಲರ ನ್ಯೂಸ್‌ಫೀಡ್‌ನಲ್ಲಿ ಕಾಣಿಸಿಕೊಳ್ಳಬಹುದು. ಈ ಪ್ರೊಫೈಲ್ ಗಾರ್ಡ್ ಅನ್ನು ಯಾವಾಗ ಬೇಕಿದ್ದರೂ ಆಫ್ ಮಾಡಬಹುದು. ವಿಂಡೋಸ್ ಕಂಪ್ಯೂಟರುಗಳಲ್ಲಿ ಇದು ಕೆಲಸ ಮಾಡುವುದಿಲ್ಲ.
ಇವನ್ನೂ ನೋಡಿ
ಯಕ್ಷಗಾನದಲ್ಲಿ ಬೆಳೆಯುವ ಸಿರಿ: ಯಕ್ಷ ಪಂಚಮಿ
ಆಧುನಿಕ ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿಯತ್ತ ಒಲಿಸಿ ಕರೆತರುವುದು ಪೋಷಕರ ಅತಿದೊಡ್ಡ ಸವಾಲಿನ ವಿಷಯವೇ. ಎಳಸು ಮನದ ಅವರ ಅದ್ಭುತ ಪ್ರತಿಭೆಯನ್ನು ಸೂಕ್ತ ದಿಕ್ಕಿಗೆ ತಿರುಗಿಸಿದರೆ...