ಯಕ್ಷಗಾನವು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಉಪೇಕ್ಷೆಗೊಳಪಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲ ಕಲಾಪ್ರಕಾರಗಳನ್ನೂ ತನ್ನೊಳಗೆ ಆವಾಹಿಸಿಕೊಳ್ಳಬಹುದಾದ ಸ್ಥಿತಿಸ್ಥಾಪಕತ್ವ ಗುಣವಿರುವ ಯಕ್ಷಗಾನವು ಎಲ್ಲ ರೀತಿಯ ಪದ್ಯಸಾಹಿತ್ಯವನ್ನೂ ತನ್ನೊಳಗೆ ಬೆಸೆದುಕೊಳ್ಳುವಷ್ಟು ಸಶಕ್ತವಾಗಿದೆ. ಹಾಡುಗಳಲ್ಲಿ...