ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ...