ಎಷ್ಟೆಷ್ಟೋ ಬ್ರೌಸರ್ ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು ನಾವು ಇಂಟರ್ನೆಟ್‌ನ ಹಲವಾರು ಪುಟಗಳನ್ನು ಬ್ರೌಸ್ ಮಾಡುತ್ತಿರುತ್ತೇವೆ. ಅಪ್ಪಿ ತಪ್ಪಿ ಯಾವುದಾದರೂ ಪ್ರಮುಖವಾದ ವೆಬ್ ತಾಣದ ಕ್ಲೋಸ್ ಬಟನ್ ಕ್ಲಿಕ್ ಮಾಡಿರುತ್ತೇವೆ. ಓಹ್, ಹೋಯಿತು, ಯಾವ ಬ್ರೌಸರ್ ಮುಚ್ಚಿತು ಅಂತ ನೆನಪಾಗುವುದಿಲ್ಲ! ಅಂದುಕೊಂಡು ಕೊರಗುತ್ತಿದ್ದೀರಾ? ಇದಕ್ಕಾಗಿಯೇ ಬಹುತೇಕ ಎಲ್ಲ ಬ್ರೌಸರ್‌ಗಳು ಕೂಡ ಪರಿಹಾರ ವ್ಯವಸ್ಥೆಯೊಂದನ್ನು ಕೊಟ್ಟಿವೆ. ಫೈರ್‌ಫಾಕ್ಸ್, ಎಡ್ಜ್ ಹಾಗೂ ಕ್ರೋಮ್ ಬ್ರೌಸರ್‌ಗಳಲ್ಲಿ ಈ ರೀತಿಯಾದರೆ, ಕೀಬೋರ್ಡ್‌ನಲ್ಲಿ ಶಿಫ್ಟ್ ಬಟನ್, ಕಂಟ್ರೋಲ್ ಬಟನ್ ಹಾಗೂ ಟಿ ಬಟನ್ ಏಕಕಾಲದಲ್ಲಿ ಒತ್ತಿಬಿಡಿ. ಕ್ಲೋಸ್ ಮಾಡಿದ ಬ್ರೌಸರ್ ಟ್ಯಾಬ್ ಪುನಃ ತೆರೆದುಕೊಳ್ಳುತ್ತದೆ.
ಇವನ್ನೂ ನೋಡಿ
ಫಿಟ್ನೆಸ್ ಕಾಯ್ದುಕೊಳ್ಳಲು Smart Watch ನೆರವು: ಹೇಗೆ?
ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನಮ್ಮ ನೆರವಿಗೆ ಬರುವುದೇ ಸ್ಮಾರ್ಟ್ ವಾಚ್ಗಳು ಅಥವಾ ಸ್ಮಾರ್ಟ್ ಬ್ಯಾಂಡ್ಗಳು. ಆಂಡ್ರಾಯ್ಡ್ ಹಾಗೂ ಆ್ಯಪಲ್ (ಐಒಎಸ್) ಸಾಧನಗಳು ಈಗ ಕೈಗೆಟಕುವಂತಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ, ಆರೋಗ್ಯದ ಕ್ಷಮತೆ ಕಾಪಾಡುವಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವ ಆ್ಯಪಲ್ ವಾಚ್ ಸೀರೀಸ್ 7ರಲ್ಲಿನ ವೈಶಿಷ್ಟ್ಯಗಳು ಇಲ್ಲಿವೆ.