ನಿಮ್ಮ ಮೊಬೈಲ್ ಫೋನ್‌ನಲ್ಲಿ ಕೆಲವೊಮ್ಮೆ ಆ್ಯಪ್‌ಗಳನ್ನು ತೆರೆದಾಗ ಓಪನ್ ಆಗದಿರುವುದು, ನೀವು ಕಳುಹಿಸಿದ ವಾಟ್ಸಾಪ್ ಸಂದೇಶಗಳು ಪೋಸ್ಟ್ ಆಗದಿರುವುದು, ಮೊಬೈಲ್ ಹ್ಯಾಂಗ್ ಆಗುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆಯೇ? ಇಂಥವಕ್ಕೆ ಕೆಲವೊಮ್ಮೆ ಸುಲಭವಾದ ಪರಿಹಾರವೆಂದರೆ, ಮೊಬೈಲ್ ಫೋನನ್ನು ರೀಸ್ಟಾರ್ಟ್ ಮಾಡುವುದು. ಪವರ್ ಬಟನ್ ಒತ್ತಿ ಹಿಡಿದಾಗ ರೀಸ್ಟಾರ್ಟ್ ಆಯ್ಕೆ ಗೋಚರಿಸುತ್ತದೆ. ಇದು ಹಿನ್ನೆಲೆಯಲ್ಲಿ ರನ್ ಆಗುತ್ತಿರುವ ಆ್ಯಪ್‌ಗಳನ್ನು ಅಥವಾ ಬೇರೆ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸಿ, ಮೊಬೈಲ್ ಫೋನ್‌ಗೆ ಫ್ರೆಶ್‌ನೆಸ್ ನೀಡುತ್ತದೆ. ವಾರಕ್ಕೊಮ್ಮೆ ರೀಸ್ಟಾರ್ಟ್ ಮಾಡುವುದು ಅತ್ಯಂತ ಸೂಕ್ತ. ಇದು ಬ್ಯಾಟರಿ ಬಾಳಿಕೆಗೆ ಕೂಡ ನೆರವಾಗುತ್ತದೆ.
ಇವನ್ನೂ ನೋಡಿ
ಕಡಿಮೆ ಬೆಲೆಗೆ ಆಲ್-ಇನ್-ಒನ್ ಪ್ರಿಂಟರ್: ನಿಮಗೆ ಯಾವುದು ಸೂಕ್ತ?
ವಿಜಯ ಕರ್ನಾಟಕ ಅಂಕಣ, ಮಾಹಿತಿ ತಂತ್ರಜ್ಞಾನ: ನವೆಂಬರ್ 4, 2013ಮನೆಗೆ ಕಂಪ್ಯೂಟರ್ ಈಗ ಅನಿವಾರ್ಯ ಎಂಬಂತಾಗಿಬಿಟ್ಟಿರುವುದರೊಂದಿಗೆ, ನಮ್ಮದೇ ಆದ ಸಣ್ಣ ಪುಟ್ಟ ಕೆಲಸಗಳಾದ, ಫೋಟೋ/ಡಾಕ್ಯುಮೆಂಟ್ ಸ್ಕ್ಯಾನಿಂಗ್ ಹಾಗೂ ಫೋಟೋ ಕಾಪಿ (ಜೆರಾಕ್ಸೃ್ ಎಂದೇ...





