ಸ್ಮಾರ್ಟ್ ಫೋನ್ ಬಂದಾಗಿನಿಂದ ಕನ್ನಡಕಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಬಹುಶಃ ಎಲ್ಲರ ಗಮನಕ್ಕೆ ಬಂದಿರಬಹುದು. ಮಕ್ಕಳು ಸಣ್ಣ ವಯಸ್ಸಿನಲ್ಲೇ ಅವಿರತವಾಗಿ ಗೇಮ್ಸ್ ಆಡುತ್ತಾ ಫೋನ್ ಸ್ಕ್ರೀನ್‌ನ ಬೆಳಕಿಗೆ ಕಣ್ಣನ್ನು ಹೆಚ್ಚು ಹೊತ್ತು ಒಡ್ಡುವುದರಿಂದ ಕಣ್ಣಿಗೆ ಹಾನಿಯಾಗುವುದು ಸಾಕಷ್ಟು ಸಂಶೋಧನೆಗಳಿಂದ ದೃಢಪಟ್ಟಿದೆ. ಇದಕ್ಕೆ ಕಾರಣ, ಸ್ಕ್ರೀನ್‌ನಿಂದ ಹೊರ ಸೂಸುವ ಬ್ಲೂ ರೇ ಅಥವಾ ನೀಲ ಕಿರಣಗಳು. ಕಣ್ಣುಗಳಿಗೆ ಒಂದಿಷ್ಟಾದರೂ ರಕ್ಷಣೆ ನೀಡಲೆಂದು ಹೆಚ್ಚಿನ ಫೋನ್ ತಯಾರಿಕಾ ಕಂಪನಿಗಳು ಈಗ ವ್ಯವಸ್ಥೆ ಮಾಡಿಕೊಂಡಿವೆ. ಅದನ್ನು ಬಳಸಿಕೊಳ್ಳಿ. ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಡಿಸ್‌ಪ್ಲೇ ಎಂಬಲ್ಲಿಗೆ ಹೋಗಿ ನೋಡಿದರೆ, ಅಡಾಪ್ಟಿವ್ ಬ್ರೈಟ್‌ನೆಸ್, ಆಟೋ ಬ್ರೈಟ್‌ನೆಸ್ ಅಥವಾ ಇದೇ ಅರ್ಥ ಬರುವ ಬೇರೆ ಯಾವುದಾದರೂ ಹೆಸರಿನ ಒಂದು ಮೆನು ಇರುತ್ತದೆ (ಫೋನ್ ಬ್ರ್ಯಾಂಡ್‌ಗೆ ಅನುಸಾರವಾಗಿ ಹೆಸರು ಬದಲಾವಣೆ ಇರಬಹುದು.) ಅದನ್ನು ಆನ್ ಮಾಡಿಟ್ಟುಕೊಳ್ಳಿ. ಕಣ್ಣುಗಳನ್ನು ರಕ್ಷಿಸಿಕೊಳ್ಳಿ.
ಇವನ್ನೂ ನೋಡಿ
ಗೂಗಲ್ ಮ್ಯಾಪ್ನಲ್ಲಿ Pegman ಎಂಬ ಗೆಳೆಯ ನಿಮಗೆ ಗೊತ್ತೇ?
ಬ್ರೌಸರ್ನಲ್ಲಿ ಗೂಗಲ್ ಮ್ಯಾಪ್ ತೆರೆದಾಗ, ಕೆಳಗಿನ ಬಲ ಮೂಲೆಯಲ್ಲಿ ನ್ಯಾವಿಗೇಶನ್ ನಿಯಂತ್ರಣ ಕೇಂದ್ರದಲ್ಲಿ ಈ ಪೆಗ್ಮ್ಯಾನ್ ಕಾದಿರುತ್ತಾನೆ. ಈ ಮ್ಯಾಪ್ನಲ್ಲಿ ನಾವು ನೋಡಬೇಕಾದ ಸ್ಥಳದ ರಸ್ತೆಗಳು ಹೇಗಿವೆ, ಅಲ್ಲಿರುವ ಸ್ಮಾರಕಗಳು ಅಥವಾ ಕಟ್ಟಡಗಳು ಏನೆಲ್ಲಾ ಇವೆ, ಹೇಗಿವೆ ಎಂಬುದನ್ನು ಈ ಸ್ಟ್ರೀಟ್ ವ್ಯೂ ಎಂಬ ವೈಶಿಷ್ಟ್ಯವು ತೋರಿಸುತ್ತದೆ. ಇದು ಈ ಹಿಂದೆ ಗೂಗಲ್ ಕಾರ್ ದೇಶದ ಉದ್ದಗಲಕ್ಕೂ ಓಡಾಡಿ ಸಂಗ್ರಹಿಸಿರುವ, ಉತ್ತಮ ಗುಣಮಟ್ಟದ ಚಿತ್ರಗಳ ಗುಚ್ಛ.




