ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ?
ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ…
ಉದಾಹರಣೆಗೆ, ಒಂದು ಕೆಲಸ ಮಾಡುವುದು ಕಷ್ಟ ಅಂತ ನಮಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಅದನ್ನು ನಾವು “ಸುಲಭ” ಅಂತ ತಿಳಿದುಕೊಂಡು ಮುಂದುವರಿದರೆ…? ಕೆಲಸವು ಹೂ ಎತ್ತಿಟ್ಟಷ್ಟೇ ಸರಳವಾಗುತ್ತದೆ. ಕಷ್ಟ ಎಂದು ತಿಳಿದುಕೊಂಡು ಮಾಡುವಾಗ ನಮ್ಮ ಮನಸ್ಸು ಕೆಡುತ್ತದೆ, ರಕ್ತದೊತ್ತಡ ಏರುಪೇರಾಗುತ್ತದೆ. ಮನಸ್ಸಿನಲ್ಲಿ ಅಸಮಾಧಾನ ಮೂಡಿರುತ್ತದೆ. ಆಗುವುದಿಲ್ಲ, ಆಗುವುದಿಲ್ಲ… ಅನ್ನುತ್ತಲೇ ಮುಂದುವರಿದರೆ ಖಂಡಿತಾ ಕೆಲಸ ಪರಿಪೂರ್ಣವಾಗುವುದಿಲ್ಲ.
ಈ ಋಣಾತ್ಮಕ ಯೋಚನೆಗಳನ್ನೆಲ್ಲಾ ಬದಿಗಿರಿಸಿ, ಸುಲಭ ಅಂತ ತಿಳಿದುಕೊಂಡು ಮುಂದುವರಿಯಿರಿ ನೋಡೋಣ. ಬಿಪಿ ಹೆಚ್ಚಾಗುವುದಿಲ್ಲ, ಮನಸ್ಸಿಗೆ ವೇದನೆ, ಘಾಸಿಯಾದ ಅನುಭವವಾಗುವುದಿಲ್ಲ, ಚಿಂತೆ ಆವರಿಸುವುದಿಲ್ಲ. ಹೊಸದೇನನ್ನೋ ಮಾಡುತ್ತೇನೆ ಎಂಬ ಕುತೂಹಲವಿರುತ್ತದೆ. ಅದರಲ್ಲಿ ಯಶಸ್ವಿಯಾದಾಗ ದೊರೆಯುವ ಸಂತೋಷಕ್ಕೆ ಪಾರ ಇಲ್ಲ.
ಮಧ್ಯೆ ಏನಾದರೂ ಸಮಸ್ಯೆಯುಂಟಾಗಿ, ಅದನ್ನು ಅರ್ಧದಲ್ಲೇ ಬಿಡುವುದು – ಕಷ್ಟ ಎಂದುಕೊಂಡು ಮುಂದುವರಿಯುವವರ ಲಕ್ಷಣ. ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿ, ಇದನ್ನು ನಾನು ಪರಿಹರಿಸಿದರೆ ಖಂಡಿತವಾಗಿಯೂ ನನಗೆ ಜಯ ಕಟ್ಟಿಟ್ಟ ಬುತ್ತಿ, ಹೆಸರು ಬರುತ್ತದೆ, ಉತ್ಸಾಹ ಹೆಚ್ಚುತ್ತದೆ, ಎಲ್ಲರೂ ಗೌರವಿಸುತ್ತಾರೆ ಎಂಬಂತಹ ಮನೋಭಾವದಿಂದ ಕೆಲಸ ಮಾಡಿ ನೋಡೋಣ. ಯಾವುದೇ ಕೆಲಸವೂ ಕಷ್ಟವಾಗುವುದಿಲ್ಲ.
ಏನಂತೀರಿ?….
Nija, nija…. muttinantha maatugaLu…
intha lEkhanagaLu nAvu teera kaichelli kuLitAga utsAha tumbuvudaralli samshayavilla.
ಚೇತನಾ ಅವರೆ,
ಈ ಪುಟ್ಟ ಬ್ಲಾಗಿಗೆ ಸ್ವಾಗತ. ಕೆಲಸದ ಗಡಿಬಿಡಿ ನಡುವೆ ಒಂದಷ್ಟು ಬಿಡುವು ಮಾಡಿಕೊಂಡು ಕುಳಿತಾಗ ಇಂಥ ಕೆಲವು ಆಲೋಚನೆಗಳು. ಕೆಲವು ಜೊಳ್ಳು, ಕೆಲವು ಕಾಳು. ಹೌದಲ್ಲ… ಅಂತ ನನಗನಿಸಿದ್ದನ್ನು ಇಲ್ಲಿ ಭಟ್ಟಿ ಇಳಿಸಿದ್ದೇನೆ.
ನಿಮ್ಮ ಪ್ರೋತ್ಸಾಹದ ನುಡಿಗೆ ತುಂಬಾ ತುಂಬಾ ಧನ್ಯವಾದ.
muttinantaha maatannu aadiddeeri avi avare
inmele neevu tilisidanteye jeevana shaili badalisuve
🙂
ಅನಾನಸ್ (?) ಅವರೆ,
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ. ಟ್ರೈ ಮಾಡಿದ್ರೆ ಕೆಲಸ ಆರಂಭ ಆಯ್ತು ಅಂತಾನೇ ಅರ್ಥ. ಶುಭವಾಗಲಿ.