“ಬಲೆ”ಗಾರ ಜೇಡಯ್ಯ
ಬಲೆಯೊಂದ ಹೆಣೆದಿಹನು
ಒಳಗೆ ಬಂದಿಹ ಮಿಕವು
ಜಾಲದೊಳು ಸಿಲುಕುಹುದುಉದರ ನಿಮಿತ್ಥ ತಾನು
ಇದ ಹೆಣೆದಿಹನು ಜೇಡ
ಇದು ಜೀವ ಜಾಲದ
ಸೃಷ್ಟಿ ನಿಯಮ ನೋಡಾ(ನನ್ನ ಕ್ಯಾಮರಾದಲ್ಲಿ ಮತ್ತೊಂದು ಪ್ರಯತ್ನ 🙂
ಇವನ್ನೂ ನೋಡಿ
ಕಂಪ್ಯೂಟರ್ ಬಳಸುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಿ
ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ. ಉದ್ಯೋಗದಲ್ಲಿ ಮಾತ್ರವೇ ಅಲ್ಲ, ಮನರಂಜನೆ,...
ಬಳೆಗಾರ ಚೆನ್ನಯ್ಯ
ಬಾಗಿಲಿಗೆ ಬಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಜೇಡ ಹೆಣೆಯಿತು ಬಲೆ
ಬಲೆಯೊಳಗೆ ಅಲೆ
ಅಲೆಯೊಳಗೆ ಸಿಲುಕಿತು ಮಿಕ
ಅದಕೆ ಕಾಣುತಿಹುದು ನಾಕ
ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ. ಇಂತಹ ಚಿತ್ರಗಳು ಇನ್ನೂ ಬರಲಿ.
ಅವೀ,
ಸುಂದರ ಚಿತ್ರ..ಇದು ಸಹ ನೀವು ಊರಿಗೆ ಹೋದಾಗ ತೆಗೆದಿದ್ದು ಅನಿಸುತ್ತೆ?
ಜೇಡರ ಬಲೆ ಅಂದಕೂಡಲೇ ಅಣ್ಣಾವ್ರರ ಬಾಂಡ್ ಸಿನಿಮಾ ನೆನಪಾಯಿತು 🙂
ಶ್ರೀನಿವಾಸ್ ಧನ್ಯವಾದಗಳು.
ಮಿಕಕ್ಕೆ ಕಾಣುವುದು ನರಕ , ಜೇಡನಿಗಾದರೆ ನಾಕ.
ಹೌದು ಶಿವ್,
ಇದು ಕೂಡ ಊರಿನ ಕಾಣಿಕೆ… ಪಟ್ಟಣದಲ್ಲಿ ಇಂಥದ್ದು ಅಪರೂಪ.
ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು…
ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ :-))
ವೀಣಾ ಅವರೆ,
ಧನ್ಯವಾದ.
ಈ ಫೋಟೋ ಕೊಂಚ ಶೇಕ್ ಆದ ಹಾಗಿದೆ. ಅದಕ್ಕೇ ಸ್ಪಷ್ಟವಾಗಿ ಇಲ್ಲ ಅನ್ನಬಹುದು.